Homeಸಂಸ್ಕೃತಿಬಲಿಷ್ಠ ರಾಷ್ಟ್ರಗಳು ಎಂದು ಕರೆಯುತ್ತಿದ್ದೆವೋ, ಆ ರಾಷ್ಟ್ರಗಳು ನಮ್ಮ ರಾಷ್ಟ್ರಕ್ಕೆ ಕೆಂಪು ಕಾರ್ಪೆಟ್ ಹಾಕಿ ಸ್ವಾಗತ...

ಬಲಿಷ್ಠ ರಾಷ್ಟ್ರಗಳು ಎಂದು ಕರೆಯುತ್ತಿದ್ದೆವೋ, ಆ ರಾಷ್ಟ್ರಗಳು ನಮ್ಮ ರಾಷ್ಟ್ರಕ್ಕೆ ಕೆಂಪು ಕಾರ್ಪೆಟ್ ಹಾಕಿ ಸ್ವಾಗತ ಕೋರುತ್ತಿರುವುದು ನಮ್ಮ ರಾಷ್ಟ್ರದ ಹೆಗ್ಗಳಿಕೆಯಾಗಿದೆ:ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ

ದಾವಣಗೆರೆ, ಆ. 15,
ಬಲಿಷ್ಠ ಪ್ರಜಾಪ್ರಭುತ್ವದ ಹಿನ್ನಲೆಯಲ್ಲಿ ಭಾರತ ಭವ್ಯ ಭಾರತವಾಗಿ ಹೊರಹೊಮ್ಮುತ್ತಾ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ. ನಮ್ಮ ದೇಶ, ನಮ್ಮ ನಾಡಿನಲ್ಲಿ ನಾವಿಂದು ಶಾಂತಿಯುತವಾಗಿ, ನೆಮ್ಮದಿಯಿಂದ ಇದ್ದೇವೆ ಅಂದರೆ ಅದಕ್ಕೆ ನಮ್ಮ ಯೋಧರ ಪರಿಶ್ರಮವೇ ಬಹುಮುಖ್ಯ ಕಾರಣ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ ಅಭಿಪ್ರಾಯ ಪಟ್ಟರು.
ಅವರು ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಸಂಘದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತನ್ನವರನ್ನು ಬೆನ್ನಲ್ಲಿಟ್ಟುಕೊಂಡು ಭಾರತವನ್ನು ಒಡಲಲ್ಲಿ ಇಟ್ಟುಕೊಂಡು ತ್ಯಾಗ ಬಲಿದಾನಗಳ ಮೂಲಕ ಜೀವದ ಹಂಗನ್ನು ತೊರೆದು ರಾಷ್ಟ್ರವನ್ನು ರಕ್ಷಣೆ ಮಾಡಿ 148 ಕೋಟಿ ಭಾರತೀಯರ ಬದುಕು ಇವತ್ತು ಅಸ್ತಿತ್ವದಲ್ಲಿ ಇದೆ ಅಂದರೆ ಅದಕ್ಕೆ ಸೇನೆಯ ಯೋಧರು ಕಾರಣ. ಇಂತಹ ಸಂದರ್ಭದಲ್ಲಿ ಅಂತಹ ವೀರ ಯೋಧರನ್ನು ಸನ್ಮಾನಿಸುತ್ತಿರುವುದು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದೊಡ್ಡ ಗೌರವವನ್ನು ತಂದಿದೆ ಎಂದರು.
ಕೇವಲ ರಾಷ್ಟ್ರ ರಚನೆಯಲ್ಲ, ಸಂಪನ್ಮೂಲಗಳ ಸಂರಕ್ಷಣೆಯಿಲ್ಲ, ಉತ್ಪಾದನಾ ವಲಯಗಳ ಅಭಿವೃದ್ಧಿ ಇಲ್ಲ. ಆದರೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ, ವಿಜ್ಞಾನ, ತಂತ್ರಜ್ಞಾನ, ನವನವೀನತೆಯ ಅನ್ವೇಷಣೆಗಳು, ಡಿಜಿಟಲೀಕರಣ ಮತ್ತು ಆತ್ಮ ನಿರ್ಭರದ ಪರಿಕಲ್ಪನೆಗಳು ಒಂದು ರಾಷ್ಟ್ರದ ಭದ್ರತೆಯನ್ನು, ಬಲಿಷ್ಠತೆಯನ್ನು ಅವು ನಮಗೆ ಸೂಚಿಸುತ್ತಾ ಇವೆ. ಇಂದು ಭವ್ಯ ಭಾರತ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿ ಸಾಧನೆಗೈದ ಹಿನ್ನಲೆಯಲ್ಲಿ ಆತ್ಮನಿರ್ಭರದ ಭಾರತದ ಪರಿಕಲ್ಪನೆಯನ್ನು ನಮ್ಮ ಪ್ರಧಾನಿಗಳು ಹುಟ್ಟುಹಾಕಿದರು. ಪ್ರಸ್ತುತ ನಾವು ಯಾವ ರಾಷ್ಟ್ರಗಳನ್ನು ನಾವು ಬಲಿಷ್ಠ ರಾಷ್ಟ್ರಗಳು ಎಂದು ಕರೆಯುತ್ತಿದ್ದೆವೋ, ಆ ರಾಷ್ಟ್ರಗಳು ನಮ್ಮ ರಾಷ್ಟ್ರಕ್ಕೆ ಕೆಂಪು ಕಾರ್ಪೆಟ್ ಹಾಕಿ ಸ್ವಾಗತ ಕೋರುತ್ತಿರುವುದು ನೋಡಿದರೆ ಅದು ನಮ್ಮ ರಾಷ್ಟ್ರದ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧೀಜಿ ಒಳಗೊಂಡಂತೆ ಅನೇಕ ಹೋರಾಟಗಾರರ ಸೇವೆ, ತ್ಯಾಗ, ಬಲಿದಾನ, ದೇಶಪ್ರೇಮವನ್ನು ಸ್ಮರಣೆ ಮಾಡುತ್ತಾ, ಅವರು ಹಾಕಿಕೊಟ್ಟಂತಹ ಮಾರ್ಗದರ್ಶನದಲ್ಲಿ ಮುನ್ನಡೆಯೋಣ. ಜನರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಾಂಧೀಜಿ, ಲಾಲ್ ಬಹದ್ದೂರ ಶಾಸ್ತ್ರೀ, ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಕೈ ಬರಹಗಳ ಮೂಲಕ ಪತ್ರಿಕೆಯನ್ನು ಮಾಡುತ್ತಿದ್ದರು. ಅಂತಹ ಪವಿತ್ರ ಕ್ಷೇತ್ರದಲ್ಲಿ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪತ್ರಿಕಾ ಧರ್ಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಬಿ.ಕೆ.ಶಂಕರಣ್ಣ, ಚಂದ್ರಪ್ಪರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಆರ್.ಎಸ್.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಎನ್.ವಿ.ಬದರಿನಾಥ, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ.ಒಡೆಯರ್, ಖಜಾಂಚಿ ಜೆ.ಎಸ್.ವೀರೇಶ, ಕಾರ್ಯದರ್ಶಿ ಸಿ.ವೇದಮೂರ್ತಿ, ನಿರ್ದೇಶಕರಾದ ಎಂ.ಎಸ್.ಚನ್ನಬಸವ(ಶೀಲವಂತ್), ಭಾರತಿ, ಪಿ.ಮಂಜುನಾಥ ಕಾಡಜ್ಜಿ, ಅಣ್ಣಪ್ಪ, ಗಿರೀಶ, ಬಿ.ಎಸ್.ಬಸವರಾಜ, ಇತರೆ ಪತ್ರಕರ್ತರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments