- ಕಲಬುರಗಿ:ಸಂತೋಷ ಹೂಗಾರ ಕಣ್ಣಪ್ಪ ಶರಣರ ವಚನಗಳು ಆಳವಾದ ತಾತ್ವಿಕ ಚಿಂತನೆ ಹಾಗೂ ಮಾರ್ಮಿಕ ಅರ್ಥ ಹೊಂದಿವೆ. ಪ್ರತಿವಚನವು ಆತ್ಮ ಸಾಕ್ಷತ್ಕಾರ, ಭಕ್ತಿ ಮತ್ತು ಶರಣತತ್ವ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಅವು ಜೀವನದ ನಿಜವಾದ ಗುರಿಯ ಕಡೆಗೆ ದಾರಿಯನ್ನು ತೋರಿಸುತ್ತವೆ. ಅಹಂಕಾರವನ್ನು ತೊರೆದು ಗುಹೇಶ್ವರನಲ್ಲಿ ಸಂಪೂರ್ಣ ಶರಣಾಗುವ ಸಂದೇಶವನ್ನು ಸಾರುತ್ತವೆ. ಹಾಗಾಗಿ ಆಧ್ಯಾತ್ಮಿಕ ಉನ್ನತಿ ಸಾಧಿಸಿದ ಶರಣರು ಎಂದು ಸಂತೋಷ ಹೂಗಾರ ಉಪನ್ಯಾಸ ನೀಡಿದರು. ೧೨ನೇ ಶತಮಾನದ ನಂತರವು ಸಾಹಿತ್ಯ ಕ್ಷೇತ್ರದಲ್ಲಿ ಗಾಣದ ಕಣ್ಣಪ್ಪನವರ ಉಲ್ಲೇಖವಿದ್ದುದು ಕಂಡುಬರುತ್ತದೆ. ಶರಣ ಸಾಹಿತ್ಯದಲ್ಲಿ ಅವರಿಗೆ ವಿಶಿಷ್ಟವಾದ ಸ್ಥಾನವಿತ್ತು ಎಂಬುದು ತಿಳಿದುಬರುತ್ತದೆ ಎಂದು ರಾಮತೀರ್ಥ ನಗರದ ಆಂಜನೇಯ ಕಾಲೋನಿಯಲ್ಲಿ ಅರುಣಕುಮಾರ ಕಲಶೆಟ್ಟಿಯವರ ಮನೆ ಅಂಗಳದಲ್ಲಿ ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಶರಣದರ್ಶನ ಉಪನ್ಯಾಸ ಮಾಲೆಯಲ್ಲಿ ಗಾಣದ ಕಣ್ಣಪ್ಪ ಕುರಿತು ಉಪನ್ಯಾಸ ಮಾಡಿದರು. ಆಗಿನ ಶರಣರ ಅನುಭವ ಮಂಟಪವೇ ಇಂದಿನ ಭಾರತ ದೇಶದ ಸಂಸತ್ ಭವನ ಎಂದು ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಡುಗೆ ಅಪಾರ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಕೃಷಿ ಅಧಿಕಾರಿ ಬಸವರಾಜ ಎನ್. ಪುಣ್ಯಶೆಟ್ಟಿ ರವರು ಮಾತನಾಡಿದರು.
ಕಲ್ಯಾಣಪ್ಪ ಬಿರಾದಾರ, ಓಂಕಾರ ನಡೆಸಿಕೊಟ್ಟರು. ಬಸವರಾಜ ಧೂಳಾಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಕುಮಾರ ಕಲಶೆಟ್ಟಿ ಸ್ವಾಗತಿಸಿದರು. ಶರಣದರ್ಶನ ಉಪನ್ಯಾಸ ಮಾಲೆಯ ಸಂಚಾಲಕ ಶಿವರಾಜ ಅಂಡಗಿ ಕಾರ್ಯಕ್ರಮ ನಿರೂಪಿಸಿದರು. ವಿನೋದ ಜನೇವರಿ ವಂದಿಸಿದರು. ಕಾರ್ಯಕ್ರಮದಲ್ಲಿ ಪಂಡಿತರಾಯ ಕಲಶೆಟ್ಟಿ, ಮೈನಾಬಾಯಿ ಕಲಶೆಟ್ಟಿ, ಗುರುಸ್ವಾಮಿ, ಶರಣರಾಜ ಕಲಶೆಟ್ಟಿ, ಮಹಾಂತೇಶ ನಿಂಬರ್ಗಾ, ಶರಣು ವಗ್ಗಾಲೆ, ಶಾಂತಾ, ಚಂದ್ರಕಲಾ, ಮಹಾಂತಮ್ಮ ಹಾಗೂ ಇತರರು ಉಪಸ್ಥಿತರಿದ್ದರು.
ಫೋಟೊ : ರಾಮತೀರ್ಥ ನಗರದ ಆಂಜನೇಯ ಕಾಲೋನಿಯಲ್ಲಿ ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಶರಣದರ್ಶನ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಂತೋಷ ಹೂಗಾರ, ಬಿ.ಎನ್. ಪುಣ್ಯಶೆಟ್ಟಿ, ಶಿವರಾಜ ಅಂಡಗಿ, ಬಸವರಾಜ ಧೂಳಾಗುಂಡಿ, ಕಲ್ಯಾಣಪ್ಪ ಬಿರಾದಾರ ಉಪಸ್ಥಿತರಿದ್ದರು.(ಶಿವರಾಜ ಅಂಡಗಿ)

