Thursday, July 16, 2026
Homeಕೃಷಿ"ಅತೀಯಾದ ಕೀಟನಾಶಕ ಬಳಕೆ ಜೇನು ಸಂತತಿಗೆ ಮಾರಕ" ಕತ್ತಲಗೆರೆ ಕೃಷಿ ಕೇಂದ್ರದಲ್ಲಿ ಜೇನು ತರಬೇತಿ

“ಅತೀಯಾದ ಕೀಟನಾಶಕ ಬಳಕೆ ಜೇನು ಸಂತತಿಗೆ ಮಾರಕ” ಕತ್ತಲಗೆರೆ ಕೃಷಿ ಕೇಂದ್ರದಲ್ಲಿ ಜೇನು ತರಬೇತಿ

ದಾವಣಗೆರೆ:ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಪರಾಗಸ್ಪರ್ಶದ ಮೂಲಕ ಇಳುವರಿ ಹೆಚ್ಚಿಸಲು, ಶುದ್ಧ ಜೇನು ತುಪ್ಪ ಪಡೆಯಲು ಜೇನು ಸಾಕಣೆ ಮಾಡಿ ಎಂದು ಆವರಣದ ಮುಖ್ಯಸ್ಥರು ಡಾ ಬಿ ಎಂ ಆನಂದಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕತ್ತಲಗೆರೆಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಎರಡು ದಿನಗಳ ಜೇನು ಕೃಷಿ ತರಬೇತಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ ಗಂಗಪ್ಪಗೌಡ ಬಿರಾದರ ರವರು ಜೇನು ಕೃಷಿ ಮತ್ತು ಸಾವಯವ ಕೃಷಿ ಒಂದೇ ಮುಖದ ಎರಡು ನಾಣ್ಯಗಳು ಯಾಕೆಂದರೆ ರಾಸಾಯನಿಕ ಮತ್ತು ಕೀಟನಾಶಕಗಳ ಬಳಕೆ ಕಡಿಮೆ ಮಾಡಿದರೆ ಜೇನು ಸಂತತಿ ಉಳಿಸಬಹುದು ಎಂದು ಹೇಳಿದರು. ಹಾಗಾಗಿ ಸರ್ಕಾರ ಈ ಜೇನು ಕೃಷಿ ಉತ್ತೆಸ್ಜಿಸಲು ಮಧುವನ ಯೋಜನೆ ಅಡಿಯಲ್ಲಿ ರೈತರಿಗೆ ತರಬೇತಿ ನೀಡಿ ಸಬ್ಸಿಡಿ ಸಹಾಯಧನ ದಲ್ಲಿ ಜೇನು ಪೆಟ್ಟಿಗೆ, ಜೇನು ನೊಣಗಳ ಕುಟಂಬ ಮತ್ತು ಸ್ಟಾಂಡ್ ಗಳನ್ನ ನೀಡುತ್ತಿದೆ. ಸಾಮಾನ್ಯ ರೈತರಿಗೆ ಶೇ 75 % & ಪ ಜಾ , ಪ ಪಂ ಜಾತಿಯರಿಗೆ ಶೇ 90% ಸಹಾಯಧನ ಕೊಡುತ್ತಿದೆ ಎಂದು ತಿಳಿಸಿದರು. ಇತ್ತಿಚ್ಚೆಗೆ
ಕೀಟನಾಶಕಗಳ ಅತಿಯಾದ ಬಳಕೆ, ವರ್ಷವಿಡೀ ಲಭ್ಯವಿಲ್ಲದ ಹೂವಿನ ಮಕರಂದ, ಹವಾಮಾನ ವೈಪರೀತ್ಯ, ‌ ರೋಗಗಳು, ಮತ್ತು ಮಾರುಕಟ್ಟೆಯಲ್ಲಿ ಕೃತಕ ಜೇನುತುಪ್ಪದಿಂದ ಉಂಟಾಗುವ ಪೈಪೋಟಿ ಜೇನುಸಾಕಣೆಗೆ ಮುಖ್ಯ ಸಮಸ್ಯೆಗಳು ಮತ್ತು ಸವಾಲುಗಳಾಗಿವೆ ಎಂದರು. ಕಳೆದ ವರ್ಷ ಕರ್ನಾಟಕದಲ್ಲಿ 895 ಟನ್ ಅಷ್ಟು ಜೇನು ತುಪ್ಪದಿಂದ ಸರ್ಕಾರಕ್ಕೆ 108 ಕೋಟಿ ನೇರವಾಗಿ ಆದಾಯ ಬಂದಿದೆ ಆದರೆ ಪರಾಗಸ್ಪರ್ಶದ ಮೂಲಕ ಬಂದಿರುವ ಆದಾಯ ನೂರಾರು ಕೋಟಿಯಲ್ಲಿ ಇರುತ್ತದೆ ಎಂದರು.
ಕೀಟಶಾಸ್ತ್ರದ ವಿಜ್ಞಾನಿಗಳಾದ ಡಾ ಶ್ರೀಕಾಂತ ಮತ್ತು ಡಾ ಶರಣಪ್ಪ ರವರು ಸುಮಾರು ಒಂದು ದಿನ ಜೇನು ಸಾಕಣೆ ಕುರಿತು ಭೋದನೆ ಮಾಡಿದರು.
ಎರಡನೇ ದಿನ ಜೇನು ಕೃಷಿಕರಾದ ಕತಲಗೆರೆಯ ರುದ್ರೇಶ್ , ವಸಂತಮ್ಮ ಮತ್ತು ತರಬೇತಿ ನೀಡುತ್ತಾ ಪರಿಶುದ್ಧವಾದ ಜೇನುತುಪ್ಪ ಉತ್ಪಾದಿಸಲು ಹೆಚ್ಚು ಶ್ರಮ ಹಾಗೂ ಖರ್ಚು ತಗಲುವುದರಿಂದ, ಕಲಬೆರಕೆ ಜೇನುತುಪ್ಪದ ಜೊತೆ ಸ್ಪರ್ಧಿಸುವುದು ನೈಜ ಜೇನು ಕೃಷಿಕರಿಗೆ ಕಷ್ಟವಾಗುತ್ತದೆ ಎಂದರು.
ಸಂತೆಬೆನ್ನೂರಿನ ಶಶಿಕುಮಾರ್ ಪ್ರಾಯೋಗಿಕ ತರಬೇತಿ ನೀಡುತ್ತಾ ಹೆಚ್ಚಿನ ರೈತರಿಗೆ ಜೇನುಸಾಕಣೆಯ ವೈಜ್ಞಾನಿಕ ಪದ್ಧತಿಯ ಬಗ್ಗೆ ಸರಿಯಾದ ತರಬೇತಿ ಹಾಗೂ ಮಾರ್ಗದರ್ಶನದ ಕೊರತೆಯನ್ನ, ಸರ್ಕಾರದ ಸೌಲಭ್ಯಗಳು ಮತ್ತು ಜೇನು ಪೆಟ್ಟಿಗೆಗಳನ್ನು ಪಡೆಯಲು ಕಚೇರಿ ಅಲೆದಾಟ ಸಮಸ್ಯೆಗಳನ್ನ ಕತ್ತಲಗೆರೆಯ ವಿಸ್ತರಣಾ ಶಿಕ್ಷಣ ಘಟಕ ಮತ್ತು ದಾವಣಗೆರೆ ತೋಟಗಾರಿಕೆ ಇಲಾಖೆ ಗಳು ದೂರಮಾಡಿದೆ ಎಂದು ಹೇಳಿದರು. ಹಾಗೆ ಅವರು ಸ್ವತ 150kg ತುಪ್ಪವನ್ನ ಈ ವರ್ಷ ಉತ್ಪಾದಿಸಿ ಮಾರಾಟ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ ಬಿ ಎಂ ಆನಂದಕುಮಾರ, ಡಾ ಸನ್ನತಿಮ್ಮಪ್ಪ, ಡಾ ಮಂಜುನಾಥ್, ಡಾ ಗಂಗಪ್ಪಗೌಡ ಬಿರಾದರ್, ಡಾ ಪ್ರಕಾಶ್, ಡಾ ಶರಣಪ್ಪ, ಡಾ ನಿರಂಜನ್, ರೈತರಾದ ವಸಂತಮ್ಮ, ರುದ್ರೇಶ್, ಶಶಿಕುಮಾರ್, ಚೇತನಕುಮಾರ್, ಹೀಗೆ 70ಕ್ಕೂ ಹೆಚ್ಚು ದಾವಣಗೆರೆ ಜಿಲ್ಲೆಯ ರೈತರು ಈ ತರಬೇತಿಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments