Homeಸಂಸ್ಕೃತಿಸಮಾಜಕ್ಕೆ ಉತ್ತಮ ಸಂದೇಶ ದೊರೆಯಬಹುದೆಂದು ಭಾವಿಸಿ, ರವಿ ಹಂಜ್ ಆಹ್ವಾನವನ್ನು ಗೌರವಿಸಿ ಸಮಾರಂಭದಲ್ಲಿ ಭಾಗವಹಿಸಿದ್ದೆವು:ಶ್ರೀಮದ್ ವಿಭುತಿಪುರ...

ಸಮಾಜಕ್ಕೆ ಉತ್ತಮ ಸಂದೇಶ ದೊರೆಯಬಹುದೆಂದು ಭಾವಿಸಿ, ರವಿ ಹಂಜ್ ಆಹ್ವಾನವನ್ನು ಗೌರವಿಸಿ ಸಮಾರಂಭದಲ್ಲಿ ಭಾಗವಹಿಸಿದ್ದೆವು:ಶ್ರೀಮದ್ ವಿಭುತಿಪುರ ವೀರಸಿಂಹಾಸನ ಸಂಸ್ಕೃನ ಮಠದ ಶ್ರೀ ಗಳ ಸ್ಪಷ್ಟನೆ.

ಬೆಂಗಳೂರು:ಬಸವ ಮಂಟಪ ಕೃತಿ ವಿವಾದ: ನಮ್ಮ ನಿಲುವಿನ ಸ್ಪಷ್ಟನೆಯನ್ನು ಬೆಂಗಳೂರಿನ ಶ್ರೀಮದ್ ವಿಭುತಿಪುರ ವೀರಸಿಂಹಾಸನ ಸಂಸ್ಕೃನ ಮಠದ ಶ್ರೀ ಗಳಾದ ಶ್ರೀ ಷ. ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ತಮ್ಮ ಸ್ಪಷ್ಟನೆಯನ್ನು ಪ್ರಕಟಿಸಿದ್ದಾರೆ.

ಲೇಖಕ ರವಿ ಹಂಜ್ ಅವರ ಬಸದ ಮಂಟಪ ಕೃತಿಯ ಕುರಿತು ಹಾಗೂ ಸಂದರ್ಶನದಲ್ಲಿ ಬಸವಣ್ಣನವರ ಬಗ್ಗೆ ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸುವ ಬಗ್ಗೆ ನಮಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ.ಎಂದು ತಿಳಿಸಿದ್ದಾರೆ. ಮತ್ತು

ಲೇಖಕರು ಬಸವ ಮಂಟಪ ಕೃತಿಯ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ, ಬಸವಣ್ಣನವರ ಕುರಿತು ಉತ್ತಮವಾದ ವಿಚಾರಗಳು ಹಾಗೂ ಮಾಹಿತಿ ಈ ಕೃತಿಯಲ್ಲಿ ಇರಬಹುದೆಂದು ಹಾಗೂ ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ದೊರೆಯಬಹುದೆಂದು ಭಾವಿಸಿ, ಅವರ ಆಹ್ವಾನವನ್ನು ಗೌರವಿಸಿ ಸಮಾರಂಭದಲ್ಲಿ ಭಾಗವಹಿಸಿದ್ದೆವು ಎಂದು ಹೇಳಿದರು.

ಕೃತಿಯಲ್ಲಿರುವ ವಿಚಾರಗಳಿಗೂ ಹಾಗೂ ಅವರ ಅಭಿಪ್ರಾಯಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆಂದರು.

ವೀರಶೈವ ಮತ್ತು ಲಿಂಗಾಯತ ಸಮಾಜ ಒಂದೇ ಎಂಬುದು ನಮ್ಮ ಭಾವನೆ ಹಾಗೂ ನಂಬಿಕೆ. ಈ ಅಭಿಪ್ರಾಯವನ್ನೇ ಪ್ರಾರಂಭದಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇವೆ. ಸಮಾಜದ ಸಂಘಟನೆ, ಐಕ್ಯತೆ ಮತ್ತು ಬಸವಾದಿ ಶರಣರ ಆಶಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದಲೇ ಸಮಾರಂಭದಲ್ಲಿ ಮಾತನಾಡಿದ್ದೇವೆ ಹೊರತು, ಯಾವುದೇ ವ್ಯಕ್ತಿ ಅಥವಾ ಕೃತಿಯಲ್ಲಿರುವ ವಿವಾದಾತ್ಮಕ ವಿಚಾರಗಳನ್ನು ಸಮರ್ಥಿಸುವ ಉದ್ದೇಶ ನಮ್ಮದಾಗಿರಲಿಲ್ಲಾ ಎಂಬುದು ಅವರ ಸ್ಪಷ್ಟನೆಯಾಗಿದೆ.

ನಮ್ಮ ಶ್ರೀಮಠದ ಎಲ್ಲಾ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಹಾಗೂ ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರಗಳನ್ನು ಕಡ್ಡಾಯವಾಗಿ ಇರಿಸಿಕೊಂಡು ಗೌರವಿಸುತ್ತಾ ಬಂದಿದ್ದೇವೆ. ವಿಶೇಷವಾಗಿ ನಮ್ಮ ಶ್ರೀ ಮಠದ ಬೃಹತ್ ಚಾತ್ರಾ ಮಹೋತ್ಸವದಲ್ಲಿ ನಾಡಿನ ಎಲ್ಲಾ ಭಾಗಗಳಿಂದ ಜಾನಪದ ಕಲಾತಂಡಗಳನ್ನು ಆಹ್ವಾನಿಸಿ ಕಲಾಮೇಳ ಮತ್ತು 1008 ತಾಯಂದಿರು ಭಾಗವಹಿಸಿದ ಕುಂಭಗಳೊಂದಿಗೆ ಶ್ರೀ ರೇಣುಕಾಚಾರ್ಯರ ಹಾಗೂ ಜಗಜ್ಯೋತಿ ಬಸವೇಶ್ವರರ ಮೂರ್ತಿಗಳ ಭವ್ಯ ಉತ್ಸವವನ್ನು ಪ್ರತಿವರ್ಷ ಮಾಡುತ್ತಾ ಬರುತ್ತಿದ್ದೇವೆ.

ನಮ್ಮ ಗುರುಪರಂಪರೆಯ ಮೂಲ ಆಚಾರ್ಯರು ಬೋಧಿಸಿದ ಮತ್ತು ಬಸವಾದಿ ಶರಣರು ಬೋಧಿಸಿದ ಜಾತ್ಯತೀತ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ನಮ್ಮ ಶ್ರೀಮಠದಲ್ಲಿ ಚಾತ್ಯತೀತವಾಗಿ ನಾಡಿದ ಎಲ್ಲಾ ಜಾತಿಯ ಬಡಕುಟುಂಬದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ಮತ್ತು ಬೆಂಗಳೂರಿನಲ್ಲಿರುವ ಯಾವುದೇ ಶಾಲೆಗಳಿಗೆ ಕಮ್ಮಿಯಿಲ್ಲದಿರುವ ಹಾಗೆ ಉತ್ತಮ ಆಂಗ್ಲ ಮಾಧ್ಯಮ ಶಿಕ್ಷಣ ಮತ್ತು ಉತ್ತಮ ಸಂಸ್ಕಾರವನ್ನು ಕೊಡುವ ಕಾರ್ಯವನ್ನು ಅನೇಕ ದಶಕಗಳಿಂದ ಮಾಡುತ್ತಿದ್ದೇವೆ. ಮತ್ತು ಬಡಕುಟುಂಬದ ಡಯಾಲೈಸೆಸಿಸ್ ರೋಗಿಗಳಿಗೆ ಸಹಾಯವಾಗಲೆಂದು ಶ್ರೀಮಠದಲ್ಲಿ ಉಚಿತ ಡಯಾಲೆಸಿಸ್ ಕೇಂದ್ರವನ್ನು ಪ್ರಾರಂಭಿಸಿದ್ದೇವೆ. ಇವತ್ತಿಗೆ 11,500ಕ್ಕೂ ಹೆಚ್ಚು ಉಚಿತ ಡಯಾಲೆಸಿಸ್ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಅಲ್ಲದೆ, ನಮ್ಮ ಧಾರ್ಮಿಕ ಉಪನ್ಯಾಸಗಳು, ಅಂಕಣ ಬರಹಗಳು ಹಾಗೂ ಕೃತಿಗಳಲ್ಲಿ ಆಚಾರ್ಯರ ಸಂದೇಶಗಳನ್ನು ಮತ್ತು ಬಸವಾದಿ ಶರಣರ ವಚನಗಳನ್ನು ಉಲ್ಲೇಖಿಸುತ್ತಾ ಅವರ ತತ್ವಾದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಿಕೊಂಡು ಬಂದಿದ್ದೇವೆ.

ಬಸವ ಮಂಟಪ ಕೃತಿಯ ಲೇಖಕರಾದ ರವಿ ಹಂಜ್ ಅವರು ಹಾಗೂ ಈ ಕೃತಿಯ ಪ್ರಕಟಣೆಯ ಜವಾಬ್ದಾರಿ ಹೊಂದಿರುವವರು, ಪ್ರಸ್ತುತ ರಾಜ್ಯದಲ್ಲಿ ಈ ಕೃತಿಯ ವಿಚಾರವಾಗಿ ಉದ್ಭವಿಸಿರುವ ವಿವಾದ ಮತ್ತು ಘಟನೆಗಳ ಕುರಿತು ಸಮಾಜದ ಬಂಧುಗಳಿಗೆ ಸ್ಪಷ್ಟನೆ ನೀಡಬೇಕುಲೇಖಕ ರವಿ ಹಂಜ್ ಅವರ ಬಸವ ಮಂಟಪ ಕೃತಿಯ ಕುರಿತು ಮತ್ತು ನಮಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ಶ್ರೀಮದ್ ವಿಭುತಿಪುರ ವೀರಸಿಂಹಾಸನ ಸಂಸ್ಕೃನ ಮಠದ -ಶ್ರೀ ಷ. ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಬೆಂಗಳೂರು ಇವರು ಸ್ಪಷ್ಟನೆಯನ್ನು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments