ವಿಜಯಪುರ: ಆಧ್ಯಾತ್ಮ ಜೀವಿಗಳು ಶಿವದೀಕ್ಷಾ ಸಂಪನ್ನರು, ಕಠಿಣ ಧ್ಯಾನ, ಮೌನ, ನಿರಾಹಾರ ತಪಸ್ವಿ ಶ್ರೀ
ಮಲ್ಲನಗೌಡ, ಸೋಮನಗೌಡ ಪಾಟೀಲ (ಮನಗೂಳಿ) ಅವರ ಕನಮಡಿಯ ತೋಟದಲ್ಲಿ ಅವರ ಲಿಂಗೈಕ್ಯ
ಮಾತೋಶ್ರೀ ಬಸಲಿಂಗಮ್ಮನವರ ಗದ್ದುಗೆ ಸನ್ನಿಧಿಯಲ್ಲಿ ಸತತ ೯೫ ದಿನಗಳ ಕಾಲ ಧ್ಯಾನ ಮೌನ
ನಿರಾಹಾರಿಗಳಾಗಿ ಕಠಿಣ ಅನುಷ್ಠಾನಗೈದು, ಸಿದ್ದಿ ಸಾಧಕಾರದ ಕಾರಣ ವಿಜಯಪುರ-ಕನಮಡಿ ಮನಗೂಳಿ
ಸುತ್ತಮುತ್ತಲಿನ ಸದ್ಭಕ್ತರು ಸೇರಿ ಅವರ ದಿವ್ಯ ಅನುಷ್ಠಾನ ಧನ್ಯತಾ ಸಮಾರಂಭ ವನ್ನು ರವಿವಾರ ದಿನಾಂಕ
೨೦-೦೯-೨೦೨೬ ರಂದು ಬೆಳಿಗ್ಗೆ ೮-೦೦ ಘಂಟೆಗೆ ಬಾಗಲಕೋಟ ರಸ್ತೆಯ ಪಿಡಿಜೆ ಹೈಸ್ಕೂಲ್ ಹತ್ತಿರ ಶ್ರೀ ಕೃಷ್ಣ
ವಾದಿರಾಜರ ಮಠದ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದಾರೆ.
ಮನಗೂಳಿಯ ಶ್ರೀ ಮಲ್ಲನಗೌಡ ಸೋ. ಪಾಟೀಲ ಅವರು ದಿನಾಂಕ ೦೧-೦೬-೧೯೬೯ ರಂದು ಸಂಸ್ಕಾರವAತ
ಗೌಡಕಿ ಮನೆತನದ ಶಿವಭಕ್ತಿ ಸಂಪನ್ನರು ಆಧ್ಯಾತ್ಮ ಜೀವಗಳು ಆದ ಶ್ರೀ ಸೋಮನಗೌಡ.ಸೌ.
ಬಸಲಿಂಗಮ್ಮನವರ ಪುಣ್ಯ ಉದರದಲ್ಲಿ ಜನಿಸಿದರು. ನಾಲ್ಕು ಜನ ಅಕ್ಕಂದಿರು, ಒಬ್ಬ ಅಣ್ಣ, ಒಬ್ಬ ತಮ್ಮ ಹೀಗೆ
ಅಪಾರ ಬಂಧು ಬಳಗ ತುಂಬು ಕುಟುಂಬ, ಸಿರಿ ಸಂಪತ್ತಿನ ಮನೆತನದಲ್ಲಿ ಯಾವುದೇ ಕೊರತೆ ಇಲ್ಲದೆ
ಬೆಳೆದರಲ್ಲದೆ, ಶಿಕ್ಷಣ,ಸಂಘಟನೆ, ಸಮಾಜ ಸೇವೆ,ರಾಜಕೀಯ, ಆಧ್ಯಾತ್ಮ ಚಿಂತನೆಗಳನ್ನು ಮೈಗೂಡಿಸಿಕೊಂಡು
ಹಲವಾರು ಕ್ಷೇತ್ರಗಳಲ್ಲಿ ೪೦ ವರ್ಷಗಳ ಕಾಲ ನಿಸ್ವಾರ್ಥ ಸೇವೆಗೈದರು.
ಆಧ್ಯಾತ್ಮ ಚಿಂತನೆ, ಭಗವಂತನ ಸೇವೆಗೆ ಇವರ ಕುಟುಂಬವೇ ಪ್ರೇರಣೆಯಾಗಿದ್ದು. ನಿರಂತರ ಸತ್ಸಂಗ.
ಅನ್ನ ದಾಸೋಹ. ಪುರಾಣ, ಪುಣ್ಯ ಪ್ರವಚನ ಸಾಮೂಹಿಕ ಪ್ರಾರ್ಥನೆ ನಡೆಸಿಕೊಂಡು ಬರಲಾಗುತ್ತಿದೆ. ತಾಯಿ ಬಸಲಿಂಗಮ್ಮ ತ್ರಿವಿಧ ಲಿಂಗಪೂಜೆ, ಗುರುಸೇವಾ ನಿರತಳಾಗಿ ಮಕ್ಕಳಲ್ಲಿ ಕಾಯಕ ದಾಸೋಹದ ಮಹತ್ವವನ್ನು
ತಿಳಿಸಿದರು. ತಂದೆ ಸೋಮನಗೌಡರು. ಪ್ರಾಪಂಚಿಕ ವ್ಯವಹಾರದಿಂದ ಮುಕ್ತರಾಗಿ. ಭಗವತ್ ಚಿಂತನೆಯತ್ತ
ಒಲವು ತೋರಿ, ನಾಡಿನ ನಾನಾ ಪುಣ್ಯ ತೀರ್ಥ ಕ್ಷೇತ್ರಗಳನ್ನು ಹಲವಾರು ವರ್ಷ ಬರಿಗಾಲಿನಲ್ಲಿ ಸಂಚರಿಸಿ.
ದೇವರ ದರ್ಶನ. ಗುರು ಹಿರಿಯರ ಆಶೀರ್ವಾದ ಪಡೆದು ಕನಮಡಿಯ ಮಲ್ಲಿಕಾರ್ಜುನ ಬೆಟ್ಟದ ಘೋರ
ಅರಣ್ಯದಲ್ಲಿ, ನೆಲೆ ನಿಂತು ತಮ್ಮ ತಪೋ ಅನುಷ್ಠಾನ ಬಲದಿಂದ ಪರಮ ಪಾವನ ಪುಣ್ಯಕ್ಷೇತ್ರ ಮಾಡಿ,
ಹಲವಾರು ಜನ ಜಾನುವಾರಗಳಿಗೆ ಬಂದ ಸಂಕಷ್ಟಗಳನ್ನು ನಿವಾರಿಸಿ ಶ್ರೀ ಮಲ್ಲಿಕಾರ್ಜುನ ಆಶ್ರಮದ ಮೂಲಕ
‘ಗುಡ್ಡದ ಅಜ್ಜಾ’ ಎಂದು ಜನ ಮನದಲ್ಲಿ ಹೆಸರುವಾಸಿಯಾಗಿ ೯೫ ಇಳಿ ವಯಸ್ಸಿನಲ್ಲಿಯು ಉತ್ಸಾಹದಿಂದ
ಆಧ್ಯಾತ್ಮಿಕ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ. ತಂದೆಯ ಹಿರಿಯರ ಸಂಸ್ಕಾರ ತಂದೆ ತಾಯಿಯ
ಪ್ರೇರಣೆ ಆಶೀರ್ವಾದದಿಂದ ಶ್ರೀ ಮಲ್ಲನಗೌಡರು ಕೂಡ ಸಹೋದರರಾದ ಸುರೇಶಗೌಡ, ಮುಕ್ತೇಶ್ವರ,
ಧರ್ಮಪತ್ನಿ ಜಯಶ್ರೀ, ಮಕ್ಕಳಾದ ಕುಮಾರಿ ಚನ್ನಮ್ಮ. ವಿಶ್ವನಾಥ, ಶಂಕರಗೌಡರ ಹಾಗೂ ಸಹೋದರಿಯರು
ಸಾರ್ವಜನಿಕರ ಪ್ರೀತಿ ಆದರಗಳಿಂದ ಸಾಮಾಜಿಕ ಆಧ್ಯಾತ್ಮಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಸನ್ ೨೦೦೦ ಇಸವಿಯಲ್ಲಿ ನಾಡಿನ ತುಂಬ ಸಂಚರಿಸಿ, ಪ್ರತಿ ಜಿಲ್ಲೆ ತಾಲ್ಲೂಕುಗಳಲ್ಲಿ ಹಳ್ಳಿಹಳ್ಳಿಗಳಲ್ಲೂ ವೀರ
ರಾಣಿ ಕಿತ್ತೂರು ಚೆನ್ನಮ್ಮರ ಭಾವಚಿತ್ರ ವಿತರಣೆ. ಮಠ-ಮಾನ್ಯ ಆಶ್ರಮ, ಮಂದಿರಗಳಿಗೆ ಬಿಲ್ವ ಪತ್ರಿ ಸಸಿ,
ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿಗಳನ್ನು ಉಚಿತವಾಗಿ ಭಕ್ತರಿಗೆ ರೈತರಿಗೆ ನೀಡಿದ್ದಾರೆ. ಬಸವಾದಿ ಶರಣ ತತ್ವ
ಚಿಂತನೆಗಳನ್ನು ಸಾಹಿತ್ಯ, ಸಂಗೀತ, ಪುರಾಣ, ಸಭೆಗಳನ್ನು ಏರ್ಪಡಿಸಿ ಬೋಧಿಸಿದ್ದಾರೆ.
ನೀರಿನ ಸದ್ಭಳಕೆ. ಕೃಷಿ ಕಾಯಕ. ಪರಿಸರ ರಕ್ಷಣೆ, ಆರೋಗ್ಯ ತಪಾಸಣೆ ಮೂಲಕ ಸಮಾಜದಲ್ಲಿ ಜಾಗೃತಿ
ಮೂಡಿಸಿದ್ದಾರೆ. ಕಿತ್ತೂರು ಚೆನ್ನಮ್ಮರ ಪುರಾಣ. ಮಹಿಳಾ ಜಾಗೃತಿ ಸಭೆಗಳನ್ನು ಏರ್ಪಡಿಸಿ ಮಹಿಳೆಯರಲ್ಲಿ
ಶಿಕ್ಷಣ, ಸಂಘಟನೆ, ಕೌಟುಂಬಿಕ ಬದ್ಧತೆ, ಸಾಮಾಜಿಕ ಮೌಲ್ಯ, ಮಕ್ಕಳ ಲಾಲನೆ ಪಾಲನೆ ಉತ್ತಮ ಸಂಸ್ಕಾರ
ಮೂಡಿಸಿ ತಂದೆ ತಾಯಿ, ಅತ್ತೆ ಮಾವಂದಿರನ್ನು ಗೌರವಿಸಿ, ಸೇವೆ ಮಾಡಿದ ಮಕ್ಕಳು, ಸೊಸೆಯಂದಿರಿಗೆ
ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ. ಪ್ರಸ್ತುತ ರವಿವಾರ ೨೦-೦೯-೨೦೨೬ ರಂದು ಅತ್ಯಂತ ಮೌಲಿಕ
ಕಾರ್ಯಕ್ರಮಗಳಿದ್ದು. ಮಕ್ಕಳಿಂದ ತಂದೆ ತಾಯಿಯರ ಪಾದ ಪೂಜೆ, ತಂದೆ ತಾಯಿಯರ ಸೇವೆ ಮಾಡಿದ
ಮಕ್ಕಳಿಗೆ, ಸೊಸೆಯಂದಿರಿಗೆ ಹರ-ಗುರು ಚರಮೂರ್ತಿಗಳ, ಗಣ್ಯರ ಸಮ್ಮುಖದಲ್ಲಿ ಸನ್ಮಾನ ನಡೆಯಲಿದೆ ಈ
ವಿನೂತನ ಸಂಸ್ಕಾರಯುತ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಪುನೀತರಾಗಬೇಕೆಂದು ವಿನಂತಿ.
(ವರದಿ:ದಾನೇಶ ಅವಟಿ.
ವಕೀಲರು.)

