Homeಸಾರ್ವಜನಿಕ ಧ್ವನಿಆಧಾರ್ ಕೇಂದ್ರ ಸಿಬ್ಬಂದಿ ಹೆಚ್ಚುವರಿ,ಪಡಿತರ ಚೀಟಿಯ e-KYC ಮಾಡಿಸಲು ಉಂಟಾಗುವ ತೋದರೆ ನಿವಾರಿಸಲು ಒತ್ತಾಯಿಸಿ ಪ್ರತಿಭಟನೆ

ಆಧಾರ್ ಕೇಂದ್ರ ಸಿಬ್ಬಂದಿ ಹೆಚ್ಚುವರಿ,ಪಡಿತರ ಚೀಟಿಯ e-KYC ಮಾಡಿಸಲು ಉಂಟಾಗುವ ತೋದರೆ ನಿವಾರಿಸಲು ಒತ್ತಾಯಿಸಿ ಪ್ರತಿಭಟನೆ

ಜಗಳೂರು:ಪಡಿತರ ಚೀಟಿಯ e-KYC ಮಾಡಿಸಲು ಉಂಟಾಗುವ ತೋದರೆ ನಿವಾರಿಸಲು ಮತ್ತು ಹೆಚ್ಚುವರಿ ದಿನ ಗಡವು ನೀಡುವಂತೆ ಹಾಗೂ ಆಧಾರ್ ಕೇಂದ್ರ ಸಿಬ್ಬಂದಿ ಹೆಚ್ಚುವರಿ ನಿಯೋಜಿಸುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲೆಯ
ಜಗಳೂರು ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.

ಇದೇ ವೇಳೆ ಪ್ರತಿಭಟನಾಕಾರರು ತಾಲ್ಲೂಕು ಕಚೇರಿ ಎದುರು ಜಮಾಯಿಸಿ ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಬಳಿಕ ಗ್ರೇಡ್2 ತಹಾಶೀಲ್ದಾರ್ ಪಾಲಯ್ಯ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಕರವೇ ಅಧ್ಯಕ್ಷ ಎಂ. ವೈ ಮಹಾಂತೇಶ್ ಮಾತನಾಡಿದ ಅವರು ಪಡಿತರ ಚೀಟಿಯ e-KYC ಮಾಡಿಸಲು ಬೆರಳಚ್ಚು ಹೊಂದಾಣಿಕೆಯಾಗದ ಕಾರಣ ದಿನವಿಡೀ ಜನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ತಡರಾತ್ರಿಯಾದರೂ ಸಹ ಕಚೇರಿಯ ಆವರಣದಲ್ಲಿ ಜನರು ಊಟ ಮಾಡಿಕೊಂಡು ವಾಸ್ತವ್ಯ ಹೂಡಿ, ಬೆಳಗಿನ ಜಾವ 3 ಗಂಟೆಯಿಂದಲೇ ತಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಕಂಡುಬರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಮಾನ್ಯ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಆಗ್ರಹಿಸಿದರು.

ಇನ್ನೂ ಆಧಾರ್ ಕೇಂದ್ರವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವುದರಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಆಧಾರ್ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದು ಹಾಗೂ ಪಡಿತರ ಚೀಟಿಯ e-KYC ಮಾಡಿಸಲು ನೀಡಿರುವ ಸೆಪ್ಟೆಂಬರ್ 30ರ ಗಡುವನ್ನು ವಿಸ್ತರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರವೇ ಮಹಿಳಾ ಅಧ್ಯಕ್ಷೆ ಶಾಹೀನ ಬೇಗಂ, ಗೌರವಧ್ಯಕ್ಷರಾದ ಸಂಗೊಳ್ಳಿ ಸುರೇಶ ಸಂಗೊಳ್ಳಿ, ಉಪಧ್ಯಕ್ಷರಾದ ಆಫೀಜ್, ಕೆ ಎಂ ಜಗದೀಶ್ , ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಲಿಂಗರಾಜು , ಸಾಮಾಜಿಕ ಜಾಲತಾಣದ ತಾಲೂಕ ಅಧ್ಯಕ್ಷ ಮೊಹಮ್ಮದ್‌ ಅಬ್ದುಲ್ ರಖೀಬ್ ಜೆ.ಎಫ್ , ವಕೀಲ ಆರ್ ಓಬಳೇಶ್ , ನಗರ ಘಟಕ ಅಧ್ಯಕ್ಷ ಮಂಜುನಾಥ್ ಯುವ ಘಟಕಅಧ್ಯಕ್ಷರು ಶಿವಾಜಿ , ಪದಾಧಿಕಾರಿಗಳಾದ
ಮುನ್ನ , ಶಿವಣ್ಣ ಬಂಗಾರಿಗುಡ್ಡ , ತಿಪ್ಪೇಸ್ವಾಮಿ, ಸುಭೇಂದ್ರ , ಆನಂದ ಗೌಡ , ಸತ್ಯಮೂರ್ತಿ ಮಂಜುಳ ಫರ್ಜಾನ, ಗಾಯಿತ್ರಿ ಎಂ, ಅನಿಲ್ , ಹನುಮಂತ ರಾಮಸ್ವಾಮಿ, ರಘು ಸೇರಿದಂತೆ ಇತರೆ ಪದಾಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments