ದಾವಣಗೆರೆ:PDO, EO, CEO ಗಳಿಗೆ ಪ್ರಶ್ನೆ ಮಾಡಿ: ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳು ಉತ್ತರಿಸಲೇಬೇಕು! ಸರ್ಕಾರದ ಸುತ್ತೋಲೆ ಏನು ಹೇಳುತ್ತೆ?
ನಾವು ಸೋಶಿಯಲ್ ಮೀಡಿಯಾದಲ್ಲಿ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಸಮಸ್ಯೆ ಹೇಳಿಕೊಂಡರೆ ಅದು ಕೇವಲ ಆನ್‌ಲೈನ್ ಪೋಸ್ಟ್ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ!
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ಸುತ್ತೋಲೆ ಸಂಖ್ಯೆ: ಗ್ರಾಅಪ/05/ಗ.ಕೋಶ/2017 ರ ಪ್ರಕಾರ:
- ರಾಜ್ಯದ ಪ್ರತಿಯೊಂದು ಜಿಲ್ಲಾ ಪಂಚಾಯತ್ ಸಿಇಒ (CEO) ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು (EO) ತಮ್ಮ ಪದನಾಮದ ಮೇಲೆಯೇ ಅಧಿಕೃತ Facebook ಮತ್ತು Twitter ಖಾತೆಗಳನ್ನು ಸೃಜಿಸುವುದು ಕಡ್ಡಾಯ.
- ಈ ಖಾತೆಗಳನ್ನು ನಿರ್ವಹಿಸಲು ಮತ್ತು ಮಾಹಿತಿ ನವೀಕರಿಸಲು (Update) ತಾಲೂಕುವಾರು ನೋಡಲ್ ಅಧಿಕಾರಿಯನ್ನು ನೇಮಿಸಬೇಕು.
ಸಾರ್ವಜನಿಕರು ಏನು ಮಾಡಬೇಕು?
ನಿಮ್ಮ ಊರಿನ ರಸ್ತೆ, ಕುಡಿಯುವ ನೀರು, ಸ್ವಚ್ಛತೆ ಅಥವಾ ಅಭಿವೃದ್ಧಿ ಕಾಮಗಾರಿಗಳ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಅಧಿಕೃತ ಖಾತೆಗೆ ಟ್ಯಾಗ್ ಮಾಡಿ ದೂರು ದಾಖಲಿಸಿ. ಆ ದೂರಿನ ಮೇಲೆ ಕೈಗೊಂಡ ಕ್ರಮದ ಬಗ್ಗೆ (Action Taken Report) ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಕಡತದ ನಕಲು ಪಡೆದು ಅಧಿಕಾರಿಗಳನ್ನು ಜವಾಬ್ದಾರಿಯುತರನ್ನಾಗಿ ಮಾಡಿ.
ಡಿಜಿಟಲ್ ವೇದಿಕೆಗಳನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ ಆಡಳಿತದಲ್ಲಿ ಪಾರದರ್ಶಕತೆ ತರಲು ಸದ್ಬಳಕೆ ಮಾಡಿಕೊಳ್ಳಿ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಮಾಹಿತಿ.
(ಚಂದ್ರಶೇಖರ್ ಚನ್ನಗಿರಿ)

