ದಾವಣಗೆರೆ:ಮಧ್ಯ ಕರ್ನಾಟಕ ದಾವಣಗೆರೆ ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಸಿಕೊಂಡು ಮೆರೆದ ನಾಡು. ಆದರೆ ಆಧುನೀಕರಣದ ಭರಾಟೆಯಲ್ಲಿ ಇಲ್ಲಿದ್ದ ಹತ್ತಿ ಕಾರ್ಖಾನೆಗಳು ಸ್ತಬ್ಧಗೊಂಡ ಕಾರಣ ಆ ಗರಿ ಕಳಚಿ ಹೋಯಿತು. ಮಧ್ಯ ಕರ್ನಾಟಕದ ನಗರಿ ರಾಜ್ಯದ ಮಧ್ಯಭಾಗ ಪೂರ್ವ ಪಶ್ಚಿಮ, ಉತ್ತರ ದಕ್ಷಿಣದ ಕೊಂಡಿ. ಇಂತಹ ನಗರಿಗೆ ಅನೇಕ ಸವಲತ್ತು, ಆಡಳಿತ ಶಾಖೆಗಳು, ಇಲಾಖೆಗಳು ಬರಬೇಕಿತ್ತು. ಆದರೆ, ರಜಕ್ಕೆ ಇಚ್ಛಾಶಕ್ತಿ, ರಾಜಕೀಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ಕಾರಣಕ್ಕೆ ನಮಗೆ ಸವಲತ್ತು ಬರಲಿಲ್ಲ. ಸ್ಥಾನಮಾನ ಸಿಗಲಿಲ್ಲ.
ಇದೀಗ ಮತ್ತೊಂದು ಸುವರ್ಣಾವಕಾಶ ನಮ್ಮ ಪಾಲಿಗೆ ಬಂದಿದೆ. ರಾಜ್ಯ ಉಚ್ಚ ನ್ಯಾಯಾಲಯದ ಮತ್ತೊಂದು ಸಂಚಾರಿ ಪೀಠ ಆರಂಭಿಸುವ ಕುರಿತು ಚರ್ಚೆಗಳು ಆರಂಭ ಆಗಿವೆ. ಇದೆ ಸಂದರ್ಭದಲ್ಲಿ ಮಂಗಳೂರು ಅಥವಾ ದಾವಣಗೆರೆಯಲ್ಲಿ ಪೀಠ ಆರಂಭಿಸುವ ಕುರಿತು ಕ್ರಮ ವರದಿ ನೀಡುವಂತೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯು ಇಂದು ಮೊದಲ ಸಭೆ ನಡೆಸಿದೆ. ಈ ಮೂಲಕ ಹೋರಾಟ ರೂಪಿಸುವ ಶತಾಯ ಗತಾಯ ದಾವಣಗೆರೆಯಲ್ಲಿಯೇ ಹೈ ಕೋರ್ಟ್ ಸಂಚಾರಿ ಪೀಠ ಆರಂಭಿಸುವ ಒತ್ತಾಯವನ್ನು ಸರ್ಕಾರ ಸಮಿತಿಯ ಮೇಲೆ ಒತ್ತಡ ಹಾಕಲು ಒಂದು ಸಾರ್ಥಕ ಪ್ರಯತ್ನವನ್ನು ಸಮಿತಿ ಮಾಡುತ್ತಿದೆ. ಈ ಸಮಿತಿಗೆ ಬೇಕಾದದ್ದು ದಾವಣಗೆರೆ ಜನತೆಯ ಒತ್ತಾಸೆ ಮತ್ತು ಬೆಂಬಲ.
ದಾವಣಗೆರೆ ಹಾಲಿ ಶಿಕ್ಷಣ ನಗರಿ ಎಂದು ಕರೆಸಿಕೊಳ್ಳುತ್ತಿದೆ. ನಮ್ಮ ನಗರಿಯನ್ನು ಇನ್ನೂ ಎತ್ತರಕ್ಕೆ ಬೆಳೆಸಲು ಇದೊಂದು ಸುವರ್ಣಾವಕಾಶ. ನೆರೆಯ ಶಿವಮೊಗ್ಗ, ಚಿತ್ರದುರ್ಗ, ವಿಜಯನಗರ ಸೇರಿದಂತೆ ಸುತ್ತಮುತ್ತ ಜಿಲ್ಲೆಗಳನ್ನು ಸೇರಿಸಿಕೊಂಡು ಉಚ್ಚ ನ್ಯಾಯಾಲಯದ ಸಂಚಾರಿ ಪೀಠ ಸ್ಥಾಪಿಸಲು ಒತ್ತಡ ತರಬೇಕು. ಇಂಥ ಒತ್ತಡಕ್ಕೆ ಕನ್ನಡ ಪರ, ರೈತ ಸಂಘ, ದಲಿತ ಸಂಘರ್ಷ ಸಮಿತಿಗಳು ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಬೆಂಬಲ ನೀಡಬೇಕಿದೆ.
ಇಂದು ದಾವಣಗೆರೆ ನಗರದ ವಕೀಲರ ಭವನದಲ್ಲಿ ಮೊಟ್ಟ ಮೊದಲ ಸಭೆ ನಡೆಯಿತು. ಸಮಿತಿಯ ಅಧ್ಯಕ್ಷರು ಬಿ.ಎಂ. ಹನುಮಂತಪ್ಪ, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಲ್.ಎಚ್. ಅರುಣ್ ಕುಮಾರ್, ಲೋಕಿಕೆರೆ ಸಿದ್ದಪ್ಪ, ಗೋಪಾಲ್, ಮಾಜಿ ಕಾರ್ಯದರ್ಶಿಗಳಾದ ಬಸವರಾಜ, ಶ್ಯಾಂ ಎಲ್., ಹಿರಿಯ ವಕೀಲರಾದ ಆಂಜನೇಯ, ಎಂ.ಎನ್. ಹೆಗಡೆ, ಮುಷ್ತಾಕ್ ಅಹಮದ್ ಮಾಲವಿ, ಉಚ್ಚಂಗಿದುರ್ಗ ಬಸವರಾಜ, ಶಿವಣ್ಣ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡು ಹೋರಾಟದ ರೂಪುರೇಷೆಗಳನ್ನು ಚರ್ಚಿಸಿದರು.
ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಹೈ ಕೋರ್ಟ್ ಸಂಚಾರಿ ಪೀಠ ಆರಂಭಿಸಲು ಹೋರಾಟ ರೂಪಿಸುವ ಮೊದಲಸಭೆ
RELATED ARTICLES

