Homeಶಿಕ್ಷಣಇವತ್ತಿನ ಯುವ ಪೀಳಿಗೆ ಮೊಬೈಲ್‌ ಬಳಕೆಯಲ್ಲೇ ಹೆಚ್ಚಿನ ಕಾಲ ಕಳೆಯುತ್ತಾರೆ. ಅದರಿಂದ ಹೊರಬರಬೇಕು:ಡಾ ಸತ್ಯನಾರಾಯಣ

ಇವತ್ತಿನ ಯುವ ಪೀಳಿಗೆ ಮೊಬೈಲ್‌ ಬಳಕೆಯಲ್ಲೇ ಹೆಚ್ಚಿನ ಕಾಲ ಕಳೆಯುತ್ತಾರೆ. ಅದರಿಂದ ಹೊರಬರಬೇಕು:ಡಾ ಸತ್ಯನಾರಾಯಣ

ದಾವಣಗೆರೆ:ದಿನಾಂಕ 13-10-2026 ರಂದು ನಗರದ ಎ.ಆರ್.ಎಂ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಎಂ ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು  ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಡಾ. ಸತ್ಯನಾರಾಯಣ ಅವರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಉನ್ನತ ವ್ಯಾಸಂಗ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಪ್ರವೇಶಾತಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಯುವ ಪೀಳಿಗೆಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ. ಮೊನಚಾದ ಆಯುದ್ಧದ ಮೇಲೆ ನಡೆಯುವಾಗ ಬಹಳ ಎಚ್ಚರಿಕೆಯಿಂದ ನಡೆಯಬೇಕು. ಎಚ್ಚರಿಕೆ ತಪ್ಪಿ ನಡೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ಅರ್ಥೈಸಿಕೊಂಡಾಗ ಮಾತ್ರ ಅಂತಿಮ  ಗುರಿಯನ್ನು ಮುಟ್ಟುತ್ತೀರಿ. ಇವತ್ತಿನ ಯುವ ಪೀಳಿಗೆ ಮೊಬೈಲ್‌ ಬಳಕೆಯಲ್ಲೇ ಹೆಚ್ಚಿನ ಕಾಲ ಕಳೆಯುತ್ತಾರೆ. ಅದರಿಂದ ಹೊರಬರಬೇಕು. ನಮ್ಮನ್ನು ನಾವೇ ನೋಡಿಕೊಂಡಾಗ ಸಮಾಜದ ರೀತಿ ನೀತಿಗಳು ಗೊತ್ತಾಗುತ್ತದೆ. ಇವತ್ತಿನ ವಿದ್ಯಾರ್ಥಿಗಳು ಏನೇ ಮಾಡಿದರೂ ಚಾರ್ಟ್‌ ಜಿಪಿಟಿ, ಗೋಗಲ್‌‌ ಗೆ ಮೊರೆ ಹೋಗುತ್ತಾರೆ. ಇದರ ಜೊತೆಗೆ ಮೌಲ್ಯಗಳು, ನೀತಿಗಳು ಬಹಳ ಕಡಿಮೆಯಾಗುತ್ತಿವೆ. ನಿಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದು ನುಡಿದರು.

     ಕಾರ್ಯಕ್ರಮದ ಅಧ್ಯಕ್ಷತೆಯನ್ನು      ಶ್ರೀ ದೇವರಾಜ್‌ ಅರಸ್‌ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಸೋಮಶೇಖರ ಬಿ ಕಿಚಡಿ ಅವರು ವಹಿಸಿದ್ದರು. ಎ‌.ಆರ್.ಎಂ ಕಾಲೇಜಿನ  ಪ್ರಾಂಶುಪಾಲ ಡಾ. ಕಾಡಜ್ಜಿ ಶಿವಪ್ಪ, ಅಂಜಿನಪ್ಪ ಡಿ, ಡಾ. ಮೌನೇಶ್ವರ ಟಿ ಎನ್.‌ ಮನೋಹರ ಎಸ್ ಬಿ, ಡಾ. ರಾಕೇಶ್‌ ಬಿ ಸಿ. ಮೊಹಮ್ಮದ್ ರಿಯಾಜ್, ಡಾ ಮಧುಮಾಲತಿ ಜಿ ಎಸ್, ಬಸವರಾಜ ದಮ್ಮಳ್ಳಿ, ಮಂಜುಳಾ, ಸುಮ,  ಪೂಜಾ, ಮಮತ, ಗಣೇಶ, ಗೀತಾ ಪಾಟೀಲ, ಷಣ್ಮುಖ, ಶಾಂತಪ್ಪ, ಫಕ್ಕೀರಪ್ಪ , ಚಂದ್ರಪ್ಪ ಡಿ, ಶಂಭು ಕಾಯಕದ ಮತ್ತು ಎಂ ಕಾಂನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಗಣೇಶ್‌ ಪ್ರಾರ್ಥಿಸಿ ಸ್ವಾಗತಿಸಿದರೆ, ಶ್ರಿಮತಿ ಮಮತ ವಂದಿಸಿದರು. ಡಾ. ಕುಮಾರಿ ಪ್ರೇಮಾ ಎಸ್‌ ಎಲಿಗಾರ್  ನಿರೂಪಿಸಿದರು.‌

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments