Homeಶಿಕ್ಷಣವಿದ್ಯಾರ್ಥಿ ಜೀವನದಲ್ಲಿ ವೈಚಾರಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳಿ : ಡಾ. ಮಂಜಣ್ಣ

ವಿದ್ಯಾರ್ಥಿ ಜೀವನದಲ್ಲಿ ವೈಚಾರಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳಿ : ಡಾ. ಮಂಜಣ್ಣ

ಜಗಳೂರು : ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣದ ಜೊತೆಗೆ ವೈಚಾರಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕೆಂದು ವಿಶ್ರಾಂತ ಪ್ರಾಂಶುಪಾಲರಾದ ಡಾ. ಮಂಜಣ್ಣ ಕರೆ ನೀಡಿದರು.

ಜಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ರೋವರ್ ಮತ್ತು ರೇಂಜರ್, ಐ,ಕ್ಯೂ,ಎ,ಸಿ ಹಾಗೂ ವಿವಿಧ ಸಮಿತಿಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವೆಂಬುದು ಮೌಢ್ಯತೆಯನ್ನು ದೂರ ಮಾಡಲು ಉಪಯೋಗವಾಗಬೇಕು. ಕಳಂಕರಹಿತ ಬದುಕನ್ನು ಬದುಕಲು ಶಿಕ್ಷಣವು ನೆರವಾಗಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ. ಶಿಕ್ಷಣವನ್ನು ಪಡೆದ ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗದೇ ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮೌನೇಶ ಕೆ. ಪಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಕುರಿತು ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ವಿದ್ಯಾಶ್ರೀ. ಟಿ. ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ರಾಜೇಶ್ವರಿ ಪೂಜಾರಿಯವರು ಮಾತನಾಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತುಂಬಾ ಚುರುಕಾಗಿ ವಿದ್ಯಾಭ್ಯಾಸದ ಕಲಿಕೆಯನ್ನು ಮಾಡಲು ತಯಾರಾಗಬೇಕು. ಆ ತಯಾರಿ ಹೇಗಿರಬೇಕೆಂದರೆ ಮೂರು ತಿಂಗಳು ಮಾಡಿದ ಪಾಠವನ್ನು ಓದಿಕೊಂಡು ಮೂರು ಘಂಟೆಯಲ್ಲಿ ಪರೀಕ್ಷೆ ಬರೆದು ಯಶಸ್ಸು ಸಾಧಿಸಬೇಕು. ಮೂರು ವರ್ಷದ ಪದವಿ ಜೀವನದಲ್ಲಿ ಉತ್ತಮ ಜ್ಞಾನವನ್ನು ಗಳಿಸಬೇಕೆಂದು ವಿದ್ಯಾರ್ಥಿ ವೃಂದಕ್ಕೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಯುವ ಸಂಸತ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕು. ಸಾಂಚಿತ ಹಾಗೂ ಕು. ರಕ್ಷಿತಾ ಅವರನ್ನು ಸನ್ಮಾನಿಸಲಾಯಿತು ಮತ್ತು ವಿವಿಧ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಗೆಲುವು ಸಾಧಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಐ, ಕ್ಯೂ, ಎ, ಸಿ ಸಾಂಸ್ಕೃತಿಕ ಸಂಚಾಲಕರು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಸತೀಶ ಎ.ಬಿ, ಡಾ. ಲೋಕೇಶ ಸಿ. ಎಸ್, ಪ್ರಸಾದ್ ಎನ್, ಶಶಿಧರ್ ಎನ್, ಕುಮಾರಿ ದೀಪಿಕಾ, ಕಲ್ಯಾಣ್ ಕುಮಾರ್, ಹಲುವಾಗಲು ತಿಮ್ಮಪ್ಪ, ರಾಘವೇಂದ್ರ, ಶ್ರೀಮತಿ ರೂಪ, ನವೀನ್ ವಿ, ಶ್ರೀಮತಿ ಲಕ್ಷ್ಮಿ ಎನ್. ಆರ್, ಹಾಗೂ ಎಲ್ಲಾ ಅತಿಥಿ ಉಪನ್ಯಾಸಕರು, ಕಾಲೇಜಿನ ಸಿಬ್ಬಂದಿಯವರು ಉಪಸ್ಥಿತರಿದ್ದರು .

ಈ ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕರಾದ ಧನಂಜಯ ವಿ. ನಿರೂಪಣೆ ಮಾಡಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಮಲ್ಲಿಕಾರ್ಜುನ ಕೆ.ಜಿ.ಆರ್ ಪ್ರಾರ್ಥಿಸಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವೆಂಕಟೇಶ ಬಾಬು ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ವಿದ್ಯಾಶ್ರೀ. ಟಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments