Saturday, December 21, 2024
Homeಶಿಕ್ಷಣಪೋಷಕರು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡಬೇಕು, ಜೀವನ ಪರ್ಯಂತ ಆಸರೆಯಾಗಬಾರದು : ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ

ಪೋಷಕರು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡಬೇಕು, ಜೀವನ ಪರ್ಯಂತ ಆಸರೆಯಾಗಬಾರದು : ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ

ಬೆಂಗಳೂರು: (ಜುಲೈ-23):- ತಂದೆ ತಾಯಿ ಮಕ್ಕಳನ್ನು ಅಸ್ತಿಗಷ್ಟೆ ವಾರಸುದಾರರನ್ನಾಗಿ ಮಾಡುವ ಬದಲಿಗೆ, ದೇಶದ, ವಿಶ್ವದ ಆಸ್ತಿಯನ್ನಾಗಿ ಮಾಡಬೇಕು. ಅಲ್ಲದೇ ಅವರನ್ನು ಸ್ವತಂತ್ರವಾಗಿ ಬದುಕುವಂತೆ ಕಲಿಸಬೇಕು ಎಂದು ಕಾಗಿನೆಲೆ ಕನಕ ಗುರು ಪೀಠದ ತಿಂಧಿಣಿ ಬ್ರಿಜ್, ದೇವದುರ್ಗ ಶಾಖಾ ಮಠದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಹೇಳಿದರು.

ಕನಕಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 2022-23 ನೇ ಸಾಲಿನ SSLC ಮತ್ತು PUC ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಕುರುಬ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಅವರು ಪೋಷಕರು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡಬೇಕೇ ಹೊರತು, ಜೀವನ ಪರ್ಯಂತ ಅವರಿಗೆ ಆಸರೆಯಾಗಿ ಇರಬಾರದು. ಮಕ್ಕಳು ತಮ್ಮ ಕಾಲಿನ ಮೇಲೆ ತಾವೇ ನಿಲ್ಲುವಂತೆ ಮಾಡಬೇಕು. ಆಗ ಅವರು ಸಮಾಜದಲ್ಲಿ ಸತ್ ಪ್ರಜೆಗಳಾಗಿ ರೂಪಗೊಳ್ಳುಲ್ಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅಸ್ತ್ರವಾಗಿಸಿಕೊಂಡಾಗ ಮಾತ್ರ ಅವಕಾಶಗಳು ದೊರೆಯುವುದು. ಕನಕಶ್ರೀ ಚಾರಿಟಬಲ್ ಟ್ರಸ್ಟ್ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿರುವುದು ನಿಜಕ್ಕೂ ಉತ್ತಮ ಕೆಲಸ ಎಂದು ಶ್ಲಾಘಿಸಿದರು. ಇಂತಹ ಸಂಸ್ಥೆಗಳು ಸಮಾಜಕ್ಕೆ ಬಹಳ ಅವಶ್ಯಕತೆ ಇದೆ ಎಂದು ಹೇಳಿದರು.

ಮನುಷ್ಯ ಸಮಾಜಮುಖಿಯಾಗಿ ಇದ್ದಾಗ ಮಾತ್ರ ಸಮಯದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಧ್ಯಯನ ಮಾಡಿ ಉನ್ನತ ಸ್ಥಾನಕ್ಕೆ ಏರಬೇಕು ಎಂದು ಮಾಜಿ ಸಚಿವರಾದ ಶ್ರೀ ಹೆಚ್.ಎಂ.ರೇವಣ್ಣ ಮಕ್ಕಳಿಗೆ ಕಿವಿ ಮಾತು ಹೇಳಿದರು.

ವಿದ್ಯಾರ್ಥಿಗಳು ವಿದ್ಯೆಯನ್ನು ಪೂರ್ಣ ಮಾಡುವವರಿಗೆ ನಿದ್ರೆಯನ್ನು ಕಡಿಮೆ ಮಾಡಬೇಕು. ವಿದ್ಯೆ ಎನ್ನುವುದು ಒಂದು ಉತ್ತಮ ಆಯುಧ. ಹೀಗಾಗಿ ವಿದ್ಯಾವಂತರನ್ನು ಇಡೀ ಪ್ರಪಂಚ ಗೌರವಿಸುತ್ತದೆ ಎಂದು ನೆರೆಯ ರಾಜ್ಯ ಆಂಧ್ರಪ್ರದೇಶದ ಅನಂತಪುರ ಲೋಕಸಭಾ ಸದಸ್ಯರಾದ ಶ್ರೀ ಗೋರಂಟ್ಲ ಮಾಧವ ಹೇಳಿದರು.

ಕಲಬುರಗಿ ಜಿಲ್ಲೆಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವೆ ಶ್ರೀಮತಿ ಆರ.ಸುನಂದಮ್ಮ, ನಿವೃತ್ತ ಐಆರ್ ಎಸ್ ಅಧಿಕಾರಿ ಡಾ.ಜೆ.ಪಿ.ಪ್ರಕಾಶ್, ಇನ್ಸೈಟ್ ಐಎಎಸ್‌ ಅಕಾಡೆಮಿ ನಿರ್ದೇಶಕ ವಿನಯ್ ಕುಮಾರ್ ಪುರಸ್ಕೃತ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಬೆಂಗಳೂರು ಕಂದಾಯ ವಿಭಾಗದ ಒಂಬತ್ತು ಜಿಲ್ಲೆಗಳ 200 ವಿದ್ಯಾರ್ಥಿಗಳಿಗೆ ‌ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪದಕವನ್ನು ‌ನೀಡಿ ಪುರಸ್ಕರಿಸಲಾಯಿತು.

ಸಮಾಜದ ಅನೇಕ ಗಣ್ಯರು, ಪೋಷಕರು, ಬಂಧುಗಳು ನಿವೃತ್ತ ಅಧಿಕಾರಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments