ದಾವಣಗೆರೆ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ವಯಸ್ಕರ ಶಿಕ್ಷಣ ಸಮಿತಿ ಸಹಯೋಗದಲ್ಲಿ ದಾವಣಗೆರೆ ಜಿಲ್ಲೆ ಇಷ್ಟಾ ಕಲಾತಂಡದ ಸಾಕ್ಷರತೆ ಹಾಡು ಮತ್ತು ಅಕ್ಷರ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ಜಿಲ್ಲೆಯ 21 ಪಂಚಾಯತ್ ಕೇಂದ್ರಗಳ ಆಯ್ದಾ ಹಳ್ಳಿಗಳಲ್ಲಿ ಯಶಸ್ವಿ ಗೊಳಿಸುವ ಮೂಲಕ
ದಾವಣಗೆರೆ ಜಿಲ್ಲೆ ಈ ಹಿಂದೆ ಅಕ್ಷರ ವಾಣಿ, ಅಕ್ಷರ ದಾನ ಸಾಕ್ಷರತಾ ಆಂದೋಲನ ದಿನಗಳನ್ನು ನೆನಪು ಮಾಡುವ ಮುಖಾಂತರ ಕಲಿಯಲು ವಯಸ್ಸಿಲ್ಲ, ಅಕ್ಷರ ಜ್ಞಾನ ಇಲ್ಲದವರು ಜೀವನದಲ್ಲಿ ಏನೇನು ಸಂಕಷ್ಟ ಎದುರಿಸುವರೆಂಬ ಸಂದೇಶ ಸಾರುವ ನಿಟ್ಟಿನಲ್ಲಿ ಬೀದಿ ನಾಟಕ ಕಲಾವಿದರು ಹಳ್ಳಿಯ ಜನಪದರಲ್ಲಿ ಶಿಕ್ಷಣ ಮಹತ್ವ, ಸಾಮಾನ್ಯ ಜ್ಞಾನ, ಪ್ರಸ್ತುತ ಸಂದರ್ಭ ದಲ್ಲಿ ಅಗತ್ಯ ವೆಂದು ಸಾರಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ಜಿಲ್ಲೆಯ 8 ತಂಡಗಳು ಪ್ರತಿ ತಾಲ್ಲೂಕುಗಳಲ್ಲಿ ಪಂಚಾಯತ್ ಮಟ್ಟದಲ್ಲಿ ಸಾಕ್ಷರತೆ ಜಾಗೃತಿ ಅಭಿಯಾನ ಬೀದಿ ನಾಟಕ ಪ್ರದರ್ಶನ ಹಾಡುಗಳ ಮೂಲಕ ಸಾಮಾಜಿಕ ಜಾಗೃತಿ, ಮೂಡಿಸುವಲ್ಲಿ ಸಫಲರಾದರು.

ಇಪ್ಟಾ ತಂಡದ ಹಿರಿಯ ಕಲಾವಿದ ಗೆಳೆಯ ಹೆಗ್ಗೆರೆ ರಂಗಪ್ಪ, ಹಿರಿಯ ಮಾಧ್ಯಮ ವರದಿಗಾರ ಕಲಾವಿದ ಪುರಂದರ್ ಲೋಕಿಕೆರೆ, ಐರಣಿಚಂದ್ರು ನೇತೃತ್ವದಲ್ಲಿ ಕಲಾವಿದರಾದ ಕುಕ್ಕುವಾಡ ಮಹಾಂತೇಶ್, ಬಾನಪ್ಪ ಅವರಗೆರೆ ರುದ್ರೇಶ್ ಶಾಂಭವಿ,ಹರಿಹರ ಖಾದರ್ ಸೇರಿದಂತೆ ಹೂವಯ್ಯ ನರಗನಹಳ್ಳಿ
ಕಲಿಯಣ್ಣ ನೀ ಕಲಿ ಕಲಿ ಕಲಿಯಕ್ಕ ನೀ ಕಲಿ…..
ಈ ಅಕ್ಷರ ಯಾರದೋ …ಈ ಅಕ್ಷರ ನಮ್ಮದು ..
ಬಾ ತಂಗಿ ಬಾರವ್ವ ..ಅಕ್ಷರ ಕಲಿಯವ್ವ..
ಇಂಥಾ ಜನಪದ ಸಾಹಿತ್ಯ ಶೈಲಿ ಹಾಡುಗಳು
ಅಕ್ಷರ ಅರಿವು ಇಲ್ಲದೆ ಮೋಸ ಹೋಗುವ..
ಹಲವಾರು ಸಮಸ್ಯೆ ಗಳ ಎದುರಿಸುವ ನಾಟಕ
ನೆರೆದ ನೂರಾರು ಗ್ರಾಮಸ್ಥರು ಸ್ತ್ರೀಶಕ್ತಿ ಸಂಘಗಳ ಮಹಿಳೆಯರು,ಆಶಾ ಕಾರ್ಯಕರ್ತೆ ಯರು ಅಂಗನವಾಡಿ ಕಾರ್ಯಕರ್ತೆಯರ ಶಾಲಾಮಕ್ಕಳ ಗಮನ ಸೆಳೆದಿದ್ದು ಈ ಸಾಕ್ಷರತಾ ಜಾಗೃತಿ ಜಾಥಾ ಅನಕ್ಷರಸ್ಥ ಹಿರಿಯ ಹಳ್ಳಿಯ ಅಜ್ಜಿ ನಿಂಗಮ್ಮ, ಕರಿಯಮ್ಮ ನವರಂಥ ನಿರಕ್ಷರ ಸ್ಥರಿಂದ ಕೈಯಲ್ಲಿ ಕಂಜರ ಭಾರಿಸಿ ಚಾಲನೆ ನೀಡಿ ಉದ್ಘಾಟನೆ ನೆರವೇರಿಸಿದ್ದು ಈ ಅಕ್ಷರ ಜಾಥಾ ಪ್ಲಾಸ್ ಪಾಯಿಂಟ್ ಎನ್ನಬಹುದು.
ವರದಿ ಪುರಂದರ್ ಲೋಕಿಕೆರೆ
