ಮೂಡಲಗಿ: ಆ,04- ಹಳ್ಳೂರ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ತಿಳಿಸಿಕೊಡುತ್ತದೆ. ವಿದ್ಯಾರ್ಥಿಗಳು ಗುಟಕಾದಂತ ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉನ್ನತ ಸಾಧನೆ ಮಾಡಬೇಕೆಂದು ಆರ್ ಡಿ ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ.ಗೋಟುರ ಹೇಳಿದರು. ಆವರು ಗ್ರಾಮದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ ಹಾಗೂ ರೂರಲ ಡೆವಲಪ್ಮೆಂಟ್ ಸೊಸಾಯಿಟಿ ಮೂಡಲಗಿ ಕಲಾ ವಾಣಿಜ್ಯ ವಿಜ್ಞಾನ ಮತ್ತು ಸಮಾಜ ಕಾರ್ಯ ಮಹಾವಿದ್ಯಾಲಯದಿಂದ ಹಮ್ಮಿಕೊಂಡು ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮೇಲು ಕೀಳೆಂಬ ಭಾವನೆ ಬಿಟ್ಟು ಎಲ್ಲರೂ ಒಂದಾಗಿ ಬಾಳಬೇಕು. ಗ್ರಾಮ ಸುಧಾರಣೆ ಮಾಡಿ ಮಹಾತ್ಮ ಗಾಂಧೀಜಿ ಕನಸನ್ನು ನನಸು ಮಾಡಲು ಕರೆ ನೀಡಿದರು. ಎಸ್. ಏನ್. ಕುಂಬಾರ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಸಿಸ್ತು ,ಬದ್ಧತೆ ಜಿವನ ನಡೆಸುವ ಮಾರ್ಗವನ್ನು ತೋರಿಸುತ್ತಿದೆ ಎಂದು ಹೇಳಿದರು. ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮಾತನಾಡಿ ಗ್ರಾಮಗಳು ಅಭಿವೃದ್ದಿಯಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ರಾಷ್ಟ್ರ ಅಭಿವೃದ್ದಿಯಲ್ಲಿ ಸ್ವ ಇಚ್ಛೆಯಿಂದ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಮಾತನಾಡಿ ಹಳ್ಳೂರ ಗ್ರಾಮದಲ್ಲಿ 2004ರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನಾನು ಕೂಡ ಶಿಭಿರಾರ್ಥಿಯಾಗಿ ಬಾಗವಹಿಸಿ ಗ್ರಾಮದಲ್ಲಿ ಅನೇಕ ಸ್ವಚ್ಚತೆ ಹಾಗೂ ರಸ್ತೆ, ಗಿಡ ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡಿದ್ದು. ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಬದುಕುವ ಮಾರ್ಗ ತೋರಿಸಿ ಮೇಲೂ ಕೀಳೆಂಬ ಭಾವನೆ ಹೋಗುವುದು. ಇದರಿಂದ ಸಮಾಜ ಸೇವೆ ಮಾಡಲೂ ಸನ್ಮಾರ್ಗ ತೋರುವುದು ಎಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನೆಯನ್ನು ನೂತನ ಗ್ರಾಮ ಪಂಚಾಯತ ಅಧ್ಯಕ್ಷೆ ನೀಲವ್ವ ಹೊಸಟ್ಟಿ ನೆರವೇರಿಸಿದರು. ಪಿ ಕೆ ಪಿ ಎಸ್ ಅಧ್ಯಕ್ಷ ಸುರೇಶ ಕತ್ತಿ. ಗಜಾನನ ಮೀರ್ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರಂಬದಲ್ಲಿ ರಾಷ್ಟ್ರೀಯ ಸೇವಾ ಶಿಭಿರಾರ್ಥಿಗಳು ಗ್ರಾಮದಲ್ಲಿ ಜಾಥಾ ನಡೆಸಿದರು. ಈ ಸಮಯದಲ್ಲಿ ಅರ್ಚಕರಾದ ಪಾವಡೆಪ್ಪ ಪೂಜೇರಿ. ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕ ಮಂಜುನಾಥ ಕೋಹಳ್ಳಿ.ಗೀತಾ ಹಿರೇಮಠ. ವಿ ಏನ್ ಕಂಡುಗೊಳ .ಹಣಮಂತ ತೇರದಾಳ.ಕುಮಾರ ಲೋಕಣ್ಣವರ. ಮಾದೇವ ಹೊಸಟ್ಟಿ. ಲಕ್ಷ್ಮಣ ಛಬ್ಬಿ. ಶಾಂತಯ್ಯ ಹಿರೇಮಠ. ಭೀಮಪ್ಪ ಹೊಸಟ್ಟಿ. ಸಂತೋಷ ಉಪಾದ್ಯೆ. ಮುತ್ತು ಕಲ್ಲೋಳಿ. ಶ್ರೀಶೈಲ ಬಾಗಿ. ನಾಗಯ್ಯ ಹಿರೇಮಠ. ಪಾಪೂ ಶೇಡಬಾಳಕರ. ಬಸು ನಿಡೋಣಿ. ಶ್ರೀಶೈಲ ಹುಲ್ಯಾಳ. ಮಲ್ಲು ಕೂಲಿಗೊಡ. ನವೀನ ಮಗದುಮ. ಅಕ್ಷತಾ ಜಕರಡ್ಡಿ. ಮೇಘಾ ಪೂಜೇರಿ. ಸವಿತಾ ಪಡುವಳ್ಳಿ. ರಶ್ಮಿ ಕಳ್ಳಿಮನಿ ಕಳ್ಳಿಮನಿ. ಶಿವಲೀಲಾ ಉದ್ದನ್ನವರ. ಸ್ಫೂರ್ತಿ ಹಾದಿಮನಿ ಸೇರಿದಂತೆ ಗ್ರಾಮದ ಗುರು ಹಿರಿಯರು ಹಾಗೂ ಶಿಭಿರಾರ್ಥಿಗಳಿದ್ದರು. ಕಾರ್ಯಕ್ರಮವನ್ನು ಶಿಭಿರಾಧಿಕಾರಿ ಪಿ ಬಿ ಚೌಡಕಿ ಸ್ವಾಗತಿಸಿ.ಸಂಜು ಮಂಟೂರ ನಿರೂಪಿಸಿ. ಎಂ ಎಸ್ ಒಡೆಯರ ವಂದಿಸಿದರು.