ಮೂಡಲಗಿ: ಆ,14-ತಾಲೂಕಿನ ಹಳ್ಳೂರು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಮುಕ್ತವಾಗಿ ಪಾಲಕರ ಹಾಗೂ ಗುರುಗಳ ಸಭೆ ನಡೆಯಿತು.
ಮನೆಯೇ ಮೊದಲ ಪಾಠ ಶಾಲೆ.ಪ್ರತಿ ಮನೆ ಮನೆಯಲ್ಲಿ ಒಳ್ಳೆಯ ನಾಗರಿಕ ವಿದ್ಯಾವಂತ ಮಕ್ಕಳನ್ನಾಗಿ ತಯಾರು ಮಾಡೋಣ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ತಂದೆ-ತಾಯಿಗಳ ಆದ್ಯತೆ. ನಿಮ್ಮ ಮಕ್ಕಳು ದಿನಾಲು ಮನೆಯಲ್ಲಿ ಓದುವುದು ಮತ್ತು ಬರೆಯುವುದು ಮಾಡುತ್ತಾರಾ ಎಂದು ಗಮನಿಸಬೇಕು.ನಿಮ್ಮ ಮಕ್ಕಳ ಚಲನ ವಲಣದ ಬಗ್ಗೆ ಸರಿಯಾಗಿ ತಿಳಿದು ಕೊಳ್ಳಬೇಕು.ನಿಮ್ಮ ಮಕ್ಕಳ ಕಲಿಕೆ ಕುಂಠಿತ ಕಂಡರೆ ತರಗತಿಯ ಶಿಕ್ಷಕರನ್ನು /ಪ್ರಧಾನ ಗುರುಗಳನ್ನು ಸಂಪರ್ಕಿಸಬೇಕು.ಅವರಿಂದ ಮಾಹಿತಿ ಪಡೆದು, ನಂತರ ತಪ್ಪು ತಡೆಗಳನ್ನು ಸರಿ ಪಡಿಸಬೇಕು.ಆಸ್ತಿ ಮಾಡುವುದರ ಜೊತೆಯಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ. ಉತ್ತಮ ನಾಗರಿಕರನ್ನಾಗಿ ವಿದ್ಯೆ ಮತ್ತು ಸಂಸ್ಕಾರ ಭಾರತೀಯ ಒಳ್ಳೆಯ ಪ್ರಜೆಯನ್ನಾಗಿ ಮಾಡುವುದೆ ನಮ್ಮ ನಿಮ್ಮೆಲ್ಲರ ಹೊಣೆ ಎಂದು ಪ್ರಧಾನ ಗುರುಗಳಾ ಎಸ್.ಎಚ್.ವಾಸನ ಹೇಳಿದರು. ಸಭೆಯಲ್ಲಿ ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಪಿ.ಎ.ಮೋರೆ ಗುರುಗಳು ಸ್ವಾಗತಿಸಿದರು, ಎಸ್.ಎಮ್.ಬೆಳಕ್ಕಿ ಗುರುಗಳು ವಂದಿಸಿದರು.