Thursday, August 21, 2025
Homeರಾಜಕೀಯದಾವಣಗೆರೆ "ಅಹಿಂದ"ವರ್ಗಕ್ಕೆ ಆಶಾದಾಯಕ ಶಕ್ತಿ ವಿನಯ್ ಕುಮಾರ್.

ದಾವಣಗೆರೆ “ಅಹಿಂದ”ವರ್ಗಕ್ಕೆ ಆಶಾದಾಯಕ ಶಕ್ತಿ ವಿನಯ್ ಕುಮಾರ್.

ದಾವಣಗೆರೆಯ ಸರ್ವ ಸಾರ್ವಜನಿಕರಲ್ಲಿ ಸವಿನಯ ಪ್ರಾರ್ಥನೆಯೊಂದಿಗೆ ಕೆಲವು ಪ್ರಮುಖ ವಿಚಾರಗಳನ್ನ ಅವಲೋಕಿಸೋಣ.! ನಮ್ಮ ದಾವಣಗೆರೆಯ‌ ಜನ ಸರಿ ಸುಮಾರು ಮೂರು ದಶಕಳೇ ಕಳೆದರೂ ಓರ್ವ ಸಮರ್ಥ ಹಿಂದುಳಿದ ವರ್ಗಗಳ ಧ್ವನಿಯಾಗಿ ನಿಲ್ಲಬಲ್ಲ ಪ್ರತಿನಿಧಿಯನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ.! ಆಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಹಿಂದುಳಿದ ಸಮಸ್ತ ಸಮುದಾಯದಗಳನ್ನೂ ಒಗ್ಗೂಡಿಸಿ ಅವರ ಆಸೆ,ಆಕಾಂಕ್ಷೆ,ಕನಸು,ಕಷ್ಟ ಕಾರ್ಪಣ್ಯಗಳ ಆಲಿಸಿ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಓರ್ವ ಯುವ ನಾಯಕ ಅಹಿಂದದ ಗಟ್ಟಿ ಧ್ವನಿಯಾಗಿ ನಿಲ್ಲಬಲ್ಲ ಅಭ್ಯರ್ಥಿ ಈ‌ ಬಾರಿ ನಮಗೆ ಸಿಕ್ಕಿದ್ದಾನೆ‌ ಇದುವೇ ಅಪರೂಪ.! ವಾಸ್ತವಾಂಶ ಈಗಿರುವಾಗ ಸಮಸ್ತ ಹಿಂದುಳಿದ ನಾಯಕರು,ಮುಖಂಡರು,ಚಿಂತಕರು,ಸಮಾನ ಮನಸ್ಕರು,ಸರ್ವ ಸಮಾಜದ-ಸಮುದಾಯಗಳ ಮತದಾರ ಪ್ರಭುಗಳೇ ನಮ್ಮೆಲ್ಲರ ಅಸಮಾಧಾನಗಳನ್ನ ಬದಿಗಿಟ್ಟು ಎಲ್ಲರೂ ಒಂದಾಗಿ ವಿನಯ ಕುಮಾರ್ ಜಿ.ಬಿ ರವರಂತಗ ಸಮರ್ಥ ಯುವನಾಯಕರನ್ನ ಈ ಬಾರಿ ಲೋಕಸಭೆಗೆ ಕಳುಹಿಸಿ ಕೊಡುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.! ಸಿದ್ದರಾಮಯ್ಯ ನವರಂತ ಅಹಿಂದ ನಾಯಕತ್ವದ ಗಟ್ಟಿ ಧ್ವನಿ ಹುಡುಕಾಟದಲ್ಲಿದ್ದ ಜನರಿಗೆ ಆ ಶುಭ ಸಂಧರ್ಬ ಒದಗಿ ಬಂದಂತಿದೆ.! ಈ ಒಳ್ಳೆಯ ಅವಕಾಶವನ್ನ ಸೂಕ್ತವಾದ ವ್ಯಕ್ತಿತ್ವ,ಜ್ಞಾನ,ಒಳಿತು ಬಯಸುವ ಗುಣಧರ್ಮವೊಂದಿರುವ ಈ ಯುವ ನಾಯಕನೇ ನಮ್ಮ ದಾವಣಗೆರೆಯ ಆಯ್ಕೆಯಾಗಿರಲಿ.! ಇವರೇ ನಮ್ಮ ದಾವಣಗೆರೆ ಪ್ರಬಲವಾದ ಅಹಿಂದ ನಾಯಕತ್ವಕ್ಕೆ ಶಕ್ತಿ ತುಂಬ ಬಲ್ಲರು! ಇಂತಹ ಅವಕಾಶ ಮತ್ತೆ ಯಾವತ್ತೂ ಸಿಗುವುದಿಲ್ಲ ಸಿಕ್ಕ ಅವಕಾಶ ಬಳಸಿಕೊಂಡು ಇವರನ್ನ ಯಾವುದೇ ಭಯ-ಭೀತಿ-ರಾಗ-ದ್ವೇಷ ಇಲ್ಲದೇ,ಎಲ್ಲಾ ಅಸಮಾಧಾನ, ತಾರತಮ್ಯಗಳನ್ನ ದೂರ ಮಾಡಿ ಒಗ್ಗೂಡಿ ನಮ್ಮ ಭಾರತದ ಸಂಸತ್ತಿಗೆ ನಮ್ಮೆಲ್ಲರ ಪ್ರತಿಧ್ವನಿಯಾಗಿ ಬಹುಮತ ದಿಂದ ಆಯ್ಕೆ ಮಾಡಿ ಕಳಿಸೋಣ.! ವಂಧನೆಗಳು.!

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments