ವಿಜಯಪುರ : ನಗರದ ಪ್ರತಿಷ್ಟಿತ ಬನ್ಸಿಲಾಲ್ ವಿಠ್ಠಲದಾಸ ದರಬಾರ ಮಾಹಾವಿದ್ಯಾಲಯದಲ್ಲಿ ಜೀವನ ರೂಪಿಸುವ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಆಚರಿಸಿ ಶಿಕ್ಷಕರಿಗೆ ಸಂತೋಷ ಪಡಿಸಿದ ವಿದ್ಯಾರ್ಥಿಗಳು.
ನಗರದ ದರಬಾರ ಮಹಾವಿದ್ಯಾಲಯದಲ್ಲಿ ಬುಧವಾರದಂದು ನೂತನ ಸಭಾ ಭವನದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕಾರ್ಯಕ್ರಮವನ್ನು ಏರ್ಪಡಿಸಿದರು. ಈ ಕಾರ್ಯಕ್ರಮದದ ಮುಖ್ಯ ಅತಿಥಿಸ್ಥಾನವನ್ನು ಪ್ರಚಾರ್ಯರಾದ ಜಿ ಎಚ್ ಮಣ್ಣೂರು ಗುರುಗಳು ವಹಿಸಿಕೊಂಡಿದರು. ಈ ಕಾರ್ಯಕ್ರಮ ವನ್ನು ಡಾ : ಸರ್ವೇಪಲ್ಲಿ ರಾಧಾಕೃಷ್ಣ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಪ್ರಾರಂಭಿಸಿದರು.
ನಂತರ ವಿದ್ಯಾರ್ಥಿಗಳು ಎಲ್ಲ ಶಿಕ್ಷಕರಿಗೆ ಪುಷ್ಪ ಗುಚ್ಛವನ್ನು ನೀಡಿ ಅತ್ಯಂತ ಪ್ರೀತಿಯಿಂದ ಗೌರವಿಸಿ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು .
ಅದೇ ರೀತಿ ಈ ದರಬಾರ ಮಹಾವಿದ್ಯಾಲಯದ ಸಂತಸದ ವಿಷಯವೇನೆಂದರೆ ಈ ವರ್ಷ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಿಂಡಿಕೆಟ್ ಸದಸ್ಯರಾಗಿ ಆಯ್ಕೆಯಾದ ಮಹಾವಿದ್ಯಾಲಯದ ಪ್ರಚಾರ್ಯರಾದ ಶ್ರೀ ಜಿ ಎಚ್ ಮಣ್ಣೂರ ಗುರುಗಳಿಗೆ ಈ ಸಂದರ್ಭದಲ್ಲಿ
ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಪ್ರವೀಣ್ ಬಿರಾದಾರ್ ಹಾಗೂ ಪ್ರವೀಣ್ ಪಾಟೀಲ್ ಸೇರಿ ಪ್ರಚಾರ್ಯರಿಗೆ ಹೂ ಗುಚ್ಛ ನೀಡಿ ಅಭಿನಂದನೆಗಳು ಸಲ್ಲಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು ಹಾಗೂ NSS ಸಂಯೋಜಕರಾದ ಆರ್ ಬಿ ಕಪಾಲಿ ಅವರು ಮಾತನಾಡಿ ಗುರು ಎಂದರೆ ಕೇವಲ ವಿದ್ಯಾ ಅಭ್ಯಾಸ ಕಳಿಸಿದ ಶಾಲೆಯಲ್ಲಿನ ಗುರುಗಳು ಮಾತ್ರ ಗುರುಗಳು ಅಲ್ಲ ನಮ್ಮ ಪ್ರತಿಯೊಂದು ಜೀವನದ ಹಂತದಲ್ಲಿ ನಮಗೆ ಒಳ್ಳೆಯ ಸನ್ಮಾರ್ಗದಲ್ಲಿ ಹೋಗಲು ದಾರಿ ತೋರುವ ತಂದೆ – ತಾಯಿ, ಗುರು ಹಿರಿಯರು,ಎಲ್ಲರೂ ಗುರುಗಳೇ ಎಂದು ಮಾತನಾಡಿದರು. ಅದೇ ರೀತಿಯಾಗಿ ಇತಿಹಾಸ ವಿಷಯ ಉಪನ್ಯಾಸಕರಾದ ಶ್ರೀ ಗುರುರಾಜ್ ಬೊಮ್ಮನಹಳ್ಳಿ ಅವರು ಮಾತನಾಡಿ ಜೀವನ ಅನ್ನುವುದು ನೀರಿನ ಮೇಲಿನ ಗುಳ್ಳೆ ಇದ್ದ ಹಾಗೆ ಯಾವಾಗ ಏನ್ ಅಗುತ್ತು ಗೊತ್ತಿಲ್ಲ ಅದರಿಂದ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಸರಿಯಾಗಿ ಶಿಕ್ಷಕರೊಂದಿಗೆ ಪರಸ್ಪರ ಅವಿನಾಭಾವ ಸಂಬಂಧ ಇಟ್ಟೋಕೊಂಡು ತಮ್ಮ ಜೀವನವನ್ನು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಾಧನೆಯ ಮಾಡಿ ಗುರುಗಳಿಗೆ ತಂದೆ – ತಾಯಿಯರಿಗೆ ದೇಶಕ್ಕೆ ಒಳ್ಳೆಯ ಪ್ರಜೆಯಾಗ ಬೇಕೆಂದು ಹೇಳಿದರು.ಮುಂದೆ ಗುರಿ ಇರಬೇಕು ಹಿಂದೆ ಗುರಿ ಇರಬೇಕು ಎಂಬ ಸಂದೇಶವನ್ನು ನೀಡಿ ವಿದ್ಯಾರ್ಥಿಗಳಿಗೆ ಹಿತ ನುಡಿ ಹೇಳಿದರು.
ಅದೇ ರೀತಿಯಾಗಿ ಎಲ್ಲ ಗುರು ವೃಂದವು ಮಾತನಾಡಿ ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ಹೇಳಿದರು.
ನಂತರ ಅಧ್ಯಕ್ಷ ಭಾಷಣವನ್ನು ಪ್ರಾಚಾರ್ಯರಾದ ಜಿ ಎಚ್ ಮಣ್ಣೂರು ಗುರುಗಳು ಮಾತನಾಡಿ ಆಧುನಿಕ ಜಗತ್ತಿನಲ್ಲಿ ಶಿಕ್ಷಣದ ಮಹತ್ವ ಹಾಗೂ ಗುರುವಿನ ಮಹತ್ವದ ಮತ್ತು ವಿದ್ಯಾರ್ಥಿಗಳು ಶಿಕ್ಷಕರ ಜೊತೆಗೆ ಅತ್ಯಂತ ಪ್ರೀತಿಯಿಂದ ಬೆರೆತು ಜೊತೆಗೆ ಒಳ್ಳೆಯ ವಿದ್ಯಾಭ್ಯಾಸ ಪಡೆದುಕೊಂಡು ತಮ್ಮ ಚಿಕ್ಕ ವಯಸ್ಸಿನಲ್ಲಿ ಸಾಧನೆಯ ಶಿಖರಕ್ಕೆ ಮುಟ್ಟಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
ನಂತರ ಎಲ್ಲ ಶಿಕ್ಷಕರ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ನೆನಪಿನ ಕಾಣಿಗೆಯನ್ನು ಕೊಟ್ಟು ಪ್ರಚಾರ್ಯರು ಸನ್ಮಾನಿಸಿದರು .
ನಂತರ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಆಟಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡಿಸಿ ಶಿಕ್ಷಕರ ಬಳಗಕ್ಕೆ ಮನರಂಜಿಸಿದರು.
ಈ ಸಂದರ್ಭದಲ್ಲಿ ಎಲ್ಲ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.