ಬಸವಾಪಟ್ಟಣ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚನ್ನಗಿರಿ ತಹಶಿಲ್ದಾರರಾದ ಯರ್ರಿಸ್ವಾಮಿಯವರು ಪದವಿಧರರು ಹಾಗೂ ಶಿಕ್ಷಕರ ಮತದಾರ ಪಟ್ಟಿಯನ್ನು ಹೆಚ್ಚಿಸಿ ಚುನಾವಣೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಜಾಗೃತಿ ಅಭಿಯಾನವನ್ನು ಚನ್ನಗಿರಿ ತಾಲ್ಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಪದವಿಧರರು ಹಾಗೂ ಶಿಕ್ಷಕರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳುವಂತೆ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿಗೆ ಸಲಹೆ ನೀಡಿದರು. ಮುಂದುವರೆದು ಹೊಸ ನೋಂದಣಿ ನಿಯಮದನ್ವಯ ಈ ಹಿಂದೆ ನೋಂದಾವಣಿಯಾಗಿದ್ದರೂ ಪ್ರಸ್ತುತದಲ್ಲಿ ಮತ್ತೊಮ್ಮೆ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ತಮ್ಮ ಹಕ್ಕುಗಳನ್ನು ಎತ್ತಿಹಿಡಿಯುವಂತೆ ವಿನಂತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್.ಲೋಕೇಶ್ ಅವರು ಪದವಿಧರರು ಹಾಗೂ ಶಿಕ್ಷಕರುಗಳು ತಮಗೆ ಸಂವಿಧಾನದ ಅಡಿಯಲ್ಲಿ ಲಭಿಸಿರುವ ಹಕ್ಕನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನೀಲಮ್ಮ, ಉಪ ತಹಶಿಲ್ದಾರರು,
ರಾಮಕೃಷ್ಣಯ್ಯ, ಎ.ಡಿ.ಎಲ್.ಆರ್
ಬಸಣ್ಣ, ಕಂದಾಯ ನಿರೀಕ್ಷಕರು
ಸಂತೋಷ್, ಕುಮಾರ್ ನಾಯ್ಕ್ , ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಾಲೇಜಿನ ಅಧ್ಯಾಪಕರು ಹಾಜರಿದ್ದರು.
ಕಾರ್ಯಕ್ರಮವನ್ನು ಹನುಮಂತರೆಡ್ಡಿ ನಿರೂಪಿಸಿದರು, ಡಾ.ಎ.ಡಿ.ಬಸವರಾಜ್ ಅವರು ಸ್ವಾಗತಿಸಿದರು, ಯೋಗೇಶ್ ಕೆ.ಜೆ ಅವರು ವಂದಿಸಿದರು.