Thursday, March 5, 2026
Homeಆಯ್ಕೆ/ನೇಮಕ2026ರ ಮುಂದಿನ 3 ವರ್ಷದ"ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನ (ರಿ.), ಸಾಗರ" ಆಡಳಿತ ಮಂಡಳಿಯ...

2026ರ ಮುಂದಿನ 3 ವರ್ಷದ”ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನ (ರಿ.), ಸಾಗರ” ಆಡಳಿತ ಮಂಡಳಿಯ ಚುನಾವಣೆ

ಸಾಗರ:ದಿನಾಂಕ ; 08-03-2026ರ ಭಾನುವಾರದಂದು ಸಾಗರದ ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಕುರುಬ ಮೀಸಲು ಕ್ಷೇತ್ರದಿಂದ ಉಮೇದುವಾರರಾಗಿರುವ ಹೆಚ್.ಎಲ್.‌ಶ್ರೀಧರ ಆದ ನನ್ನ ಕ್ರ.ಸಂ. 02, ಗುರುತು ; ತೆಂಗಿನಕಾಯಿ ಮತದಾನ ಮಾಡಬೇಕೆಂದು ಶ್ರೀ ಧರ್ ಮನವಿಮಾಡಿಕೊಂಡಿದ್ದಾರೆ.

ಈ ಸಂಬಂಧ ಸಾಗರದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ನಾವುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜನರ ಜೊತೆ ಉತ್ತಮ ಸಂಬಂಧ ಹೊಂದಿರುತ್ತೇವೆ. ಈ‌ ಹಿಂದಿನಿಂದಲೂ ಶ್ರೀಮಾರಿಕಾಂಬ ಜಾತ್ರೆಯ ವಿವಿಧ ಸಮಿತಿಯ ಪ್ರಮುಖ ಸದಸ್ಯರಾಗಿ ಕೆಲಸ ಮಾಡಿದ್ದು, ನಿಮ್ಮ ಅಮೂಲ್ಯ ಮತವನ್ನು ನನ್ನ ಕ್ರಮಸಂಖ್ಯೆ 02, ಗುರುತಾದ “ತೆಂಗಿನಕಾಯಿ” ಗುರುತಿಗೆ ನೀಡುವುದರ ಮೂಲಕ ಗೆಲ್ಲಿಸಿ ಆಡಳಿತ ಮಂಡಳಿಗೆ ನಿರ್ದೇಶಕನನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ನಾನು ಕುರುಬ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನಾನು ವಿವಿಧ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳಲ್ಲಿ ಸಾರ್ವಜನಿಕರೊಂದಿಗೆ ಸೇವೆ ಸಲ್ಲಿಸುತ್ತ, ಜನರ ಹಾಗೂ ದೇವರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇನೆ. ವಿವಿಧ ಸಂಘ ಸಂಸ್ಥೆಗಳಲ್ಲಿ ನಮಗೆ ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅದೇ ರೀತಿ ಶ್ರೀ ಮಾರಿಕಾಂಬ ನ್ಯಾಸ ಪ್ರತಿಷ್ಠಾನದಿಂದ ಸಾರ್ವಜನಿಕರಿಗೆ ಸಿಗಬಹುದಾದ ಗರಿಷ್ಠ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಮತ್ತು ಸ್ವಚ್ಛ ಪಾರದರ್ಶಕ ಜನಪರ ದೈವ ಪರ ಆಡಳಿತವನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದು ಕೊಂಡಿದ್ದೇನೆ. ನಿಮ್ಮ ಅಮೂಲ್ಯ ಮತ ಮೇಲ್ಕಂಡ ನನ್ನ ಗುರುತಿಗೆ ಮೀಸಲಾಗಿರಲಿ ಎಂದು ಮತದಾರರಲ್ಲಿ ಮನವಿಮಾಡಿಕೊಂಡಿದ್ದಾರೆ.ಮತದಾನದ

ಸ್ಥಳ ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿನೋಬನಗರ
ಸಮಯ ; ಬೆಳಿಗ್ಗೆ 8-00 ರಿಂದ ಸಂಜೆ 4-00,ಗಂಟೆಯವರೆಗೆ ತಪ್ಪದೆ ಎಲ್ಲರೂ ಬಂದು ಮತ ಚಲಾಯಿಸಲು ಮನವಿಯನ್ನು ಹೆಚ್.ಎಲ್.ಶ್ರೀಧರ್ ಮನವಿಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments