Wednesday, July 29, 2026
Homeರಾಜ್ಯಮಾಜಿ ಸೈನಿಕರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಅಶೋಕ ಮನಗೂಳಿ

ಮಾಜಿ ಸೈನಿಕರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಅಶೋಕ ಮನಗೂಳಿ

ಸಿಂದಗಿ: ಸಿಂದಗಿ ನಗರದ ಗಾಯಕವಾಡ ಅವರ ಮನೆಯ ಹತ್ತಿರ ಮಾಜಿ ಸೈನಿಕರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಅಶೋಕ ಮನಗೂಳಿ, ದೇಶದ ಗಡಿಯನ್ನು ಕಾಪಾಡಿ ಸೇವೆ ಸಲ್ಲಿಸಿದ ಮಾಜಿ ಸೈನಿಕರ ಅನುಕೂಲಕ್ಕಾಗಿ ಈ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಈ ಭವನದಿಂದ ಮಾಜಿ ಸೈನಿಕರು ಸಭೆ-ಸಮಾರಂಭಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ. ಸರ್ಕಾರದ ಸಹಕಾರದಿಂದ ಸಿಂದಗಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ. ಕುರುಡೆ, ವಡ್ಡರ, ಭೂದಾನಿ ಗಾಯಕವಾಡ, ಮುತ್ತು ಮುಂಡೇವಾಡಿ, ಎಚ್.ಎಂ. ಉತ್ನಾಳ, ನಗರಸಭೆ ಪೌರಾಯುಕ್ತ ರವಿ ಶೀರಗುಪ್ಪಿ, ಅಶೋಕ ಕೊಳ್ಳಾರಿ, ಶ್ರೀಶೈಲ ಯಲಮೇಲಿ, ಖಾದಿರ್ ಬಂಕಲಾಗಿ, ಜಂಗಮಶೆಟ್ಟಿ, ಶಾಂತೇಶ ದುರ್ಗಿ, ಅಶೋಕ ಯಲ್ಲಾಪುರ ಸೇರಿದಂತೆ ಮಾಜಿ ಸೈನಿಕರು, ವಿವಿಧ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು
(ವರದಿ: ಖಾಜಾ ಅಮೀನ್ ಮಕಾಂದಾರ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments