Homeಬರಹಸಾಮಾಜಿಕ ದಂಭಾಚಾರ, ಕೌಟುಂಬಿಕ ಅಂಧಕಾರ ಮತ್ತು ನೈತಿಕತೆಯ ಕ್ಷೀಣತೆ.

ಸಾಮಾಜಿಕ ದಂಭಾಚಾರ, ಕೌಟುಂಬಿಕ ಅಂಧಕಾರ ಮತ್ತು ನೈತಿಕತೆಯ ಕ್ಷೀಣತೆ.

ಸಮಾಜವು ವೈವಿಧ್ಯಮಯ ವ್ಯಕ್ತಿತ್ವಗಳು ಮತ್ತು ಮನಸ್ಥಿತಿಗಳಿಂದ ಕೂಡಿದೆ. ನೈಜ ಮಾನವೀಯತೆ, ಆತ್ಮಾವಲೋಕನ ಮತ್ತು ಕರುಣೆ ಇದ್ದಲ್ಲಿ ಸಮಾಜವು ಸುಂದರವಾಗಿರುತ್ತದೆ. ಆದರೆ, ಇಂದಿನ ಕಾಲಘಟ್ಟದಲ್ಲಿ ಸಮಾಜದ ಒಂದು ವಿಭಾಗವು ತೀವ್ರತರದ ದಂಭಾಚಾರ, ಅಸೂಯೆ ಮತ್ತು ಸ್ವಯಂ ಅರಿವಿನ ಅಭಾವದಿಂದ ಬಳಲುತ್ತಿದೆ. ಧರ್ಮ, ನೀತಿ ಮತ್ತು ಸದಾಚಾರದ ಬಗ್ಗೆ ಬಹಿರಂಗವಾಗಿ ದೊಡ್ಡ ದೊಡ್ಡ ಭಾಷಣ ಮಾಡುವ ಅನೇಕರು, ತಮ್ಮ ಸ್ವಂತ ಮನೆಗಳಲ್ಲಿ ಜರುಗುವ ನೈಜ ಘಟನೆಗಳನ್ನು, ತಪ್ಪುಗಳನ್ನು ಮುಚ್ಚಿಟ್ಟು ಇತರರ ಮೇಲೆ ಅಪಪ್ರಚಾರ ಮಾಡಿ ಜೀವನವನ್ನು ಹಾಳುಮಾಡಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅಂತಹ ಸ್ವಾರ್ಥಿ ಮತ್ತು ವಿಕೃತ ಮನಸ್ಥಿತಿಗಳ ಆಳವಾದ ವಿಶ್ಲೇಷಣೆ ಇಲ್ಲಿದೆ.

  1. ಸ್ವಯಂ ಅರಿವಿನ ಅಭಾವ ಮತ್ತು ಕೌಟುಂಬಿಕ ದುರಂತಗಳು

ಮಾನವ ಜನ್ಮದ ಮೂಲ ಉದ್ದೇಶವೇ ಸರಿ-ತಪ್ಪುಗಳ ವ್ಯತ್ಯಾಸವನ್ನು ತಿಳಿದು ನಡೆಯುವುದು. ಆದರೆ, ಅನೇಕರಿಗೆ ತಮ್ಮ ಮನೆಯ ಪರಿಸ್ಥಿತಿ ಮತ್ತು ಕುಟುಂಬದ ಸದಸ್ಯರ ನಡತೆಯ ಕುರಿತು ಯಾವುದೇ ಅರಿವಿರುವುದಿಲ್ಲ. ಸ್ವಂತ ಮನೆಯ ಹೆಣ್ಣುಮಕ್ಕಳು ನೈತಿಕ ದಾರಿ ತಪ್ಪಿ ಓಡಿಹೋದರೂ ಅಥವಾ ಅನೈತಿಕ ನಡವಳಿಕೆಯಲ್ಲಿ ತೊಡಗಿದ್ದರೂ ಅದನ್ನು ತಿಳಿದುಕೊಳ್ಳುವ ಸೌಜನ್ಯವಾಗಲಿ, ಜಾಗರೂಕತೆಯಾಗಲಿ ಇರುವುದಿಲ್ಲ. ತಮ್ಮ ಮನೆಯ ಹೆಂಡತಿಯಾಗಲಿ ಅಥವಾ ಮಕ್ಕಳಾಗಲಿ ಹಿಂದಿನಿಂದ ಯಾವ ರೀತಿಯ ಕೆಟ್ಟ ಕೆಲಸಗಳನ್ನು ಮಾಡಿ ಬಂದಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಅಂಧಕಾರದಲ್ಲಿರುವ ಜನರು, ಇತರರ ಕೌಟುಂಬಿಕ ವಿಷಯಗಳಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಾರೆ. ತಮ್ಮ ಮನೆಯ ತಪ್ಪುಗಳನ್ನು ಯಾರಾದರೂ ಬೆಟ್ಟು ಮಾಡಿ ತೋರಿಸಿದರೆ ಅಥವಾ ಸತ್ಯವನ್ನು ತೆರೆದಿಟ್ಟರೆ ತಕ್ಷಣ ಕೋಪಗೊಂಡು ಜಗಳಕ್ಕೆ ನಿಲ್ಲುವ ಇವರು, ಬೇರೆಯವರ ಮನೆಯ ಹೆಣ್ಣುಮಕ್ಕಳ ಕುರಿತು ಅತ್ಯಂತ ಹಗುರವಾಗಿ ಮತ್ತು ಕೆಟ್ಟದಾಗಿ ಮಾತನಾಡುವುದರಲ್ಲಿ ಮುಂದಿರುತ್ತಾರೆ.

  1. ವಿವಾಹ ಮತ್ತು ಸಾಮಾಜಿಕ ವರ್ಗ ತಾರತಮ್ಯ

ಕುಟುಂಬದಲ್ಲಿ ಹೆಣ್ಣುಮಕ್ಕಳು ಸೂಕ್ತ ವಯಸ್ಸಿಗೆ ಬಂದಾಗ ಅವರಿಗೆ ಮದುವೆ ಮಾಡಿ ನೆಮ್ಮದಿಯ ಜೀವನ ಕಲ್ಪಿಸುವುದು ಪೋಷಕರ ಜವಾಬ್ದಾರಿ. ಆದರೆ, ಅನೇಕ ಕುಟುಂಬಗಳಲ್ಲಿ ವಯಸ್ಸಾದ ಹೆಣ್ಣುಮಕ್ಕಳಿರುತ್ತಾರೆ ತಮ್ಮ ಮನೆಯ ಹೆಣ್ಢು ಮಕ್ಕಳಿಗೆ ಸೂಕ್ತ ವಯಸ್ಸಿನಲ್ಲಿ ಮದುವೆ ಮಾಡದೆ ಮನೆಯಲ್ಲೇ ಉಳಿಸಿಕೊಂಡು, ಹೊರಗಿನವರ ಮುಂದೆ ತಾವು ಅತ್ಯುನ್ನತ ತತ್ತ್ವಜ್ಞಾನಿಗಳಂತೆ ನಟಿಸುತ್ತಾರೆ. ಮದುವೆಯ ವಿಚಾರ ಬಂದಾಗ, ಸಮಾಜದ ಬೆನ್ನೆಲುಬಾಗಿರುವ ಮತ್ತು ಕಷ್ಟಪಟ್ಟು ದುಡಿಯುವ ರೈತರನ್ನು ತಮ್ಮ ಮಕ್ಕಳಿಗೆ ಬೇಡ ಬೇರೆಯವರಿಗೆ ಮಕ್ಕಳಿಗೆ ರೈತರನ್ನು ಆಗಬೇಕು ಎಂಬ ಭಾಷಣ ಇವರಲ್ಲಿ ಎದ್ದು ಕಾಣುತ್ತದೆ. “ನಮ್ಮ ಮಗಳಿಗೆ ಇಂಜಿನಿಯರ್ ಅವಳಿಗೆ ಇಂಜಿನಿಯರ್ ಅಥವಾ ಡಾಕ್ಟರ್ ಗಂಡೇ ಬೇಕು” ಎಂದು ಹೇಳುತ್ತಾರೆ. ಅಂತಿಮವಾಗಿ ತಮ್ಮ ಮನೆಯ ಹೆಣ್ಣಿಗೆ ಮಾತ್ರ ಉತ್ತಮ ಗಂಡು ಬೇಕು. ಆದರೆ, ಇತರರ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಮದುವೆಯಾದರೆ, ಒಳ್ಳೆಯ ಮನೆತನದವರನ್ನು ಯಾರಾದರೂ ವರಿಸಿದರೆ, ಅದನ್ನು ಅತಿ ಕೀಳಾಗಿ
ಕಂಡು ವ್ಯಂಗ್ಯವಾಗಿ ಮಾತನಾಡುವುದು ಇವರ ದಿನನಿತ್ಯದ ಚಟವಾಗಿರುತ್ತದೆ. ಅವರವರ ಯೋಗ್ಯತೆ, ಅರ್ಹತೆ ತಕ್ಕಂತೆ ದೇವರು ಯಾರಿಗೆ ಎನು ನೀಡ ಬೇಕೋ ಅದೆನ್ನೆ ನೀಡಿರುತ್ತೆನೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕುತಂತ್ರಗಳು ಎಂದು ಫಲಿಸುವುದಿಲ್ಲ.

  1. ಶಿಕ್ಷಣ ಮತ್ತು ದ್ವಿಮುಖ ಧೋರಣೆ

ಶಿಕ್ಷಣವು ಪ್ರತಿಯೊಬ್ಬರಿಗೂ ತಲುಪಬೇಕಾದ ಮೂಲಭೂತ ಹಕ್ಕು. ಆದರೆ ಇಂತಹ ಮನಸ್ಥಿತಿಯ ಜನರು ಶಿಕ್ಷಣದ ವಿಷಯದಲ್ಲೂ ವಿಚಿತ್ರವಾದ ದ್ವಿಮುಖ ಧೋರಣೆಯನ್ನು ತಳೆಯುತ್ತಾರೆ. ತಮ್ಮ ಮನೆಯ ಮಕ್ಕಳಿಗೆ ವಿದ್ಯಾಭ್ಯಾಸ, ಉನ್ನತ ಹುದ್ದೆ ಮತ್ತು ಸ್ವಾತಂತ್ರ್ಯ ಅತ್ಯಗತ್ಯ ಎಂದು ಪ್ರತಿಪಾದಿಸುವ ಇವರು, ಬೇರೆಯವರ ಮನೆಯ ಹೆಣ್ಣುಮಕ್ಕಳು ಶಾಲೆ ಅಥವಾ ಕಾಲೇಜಿಗೆ ಹೋದರೆ “ಅವರು ಓದಲು ಹೋಗುತ್ತಿಲ್ಲ, ಯಾರ ಜೊತೆಯೋ ಓಡಿಹೋಗಲು ಸಂಚು ರೂಪಿಸುತ್ತಿದ್ದಾರೆ” ಎಂದು ಕಟ್ಟುಕಥೆಗಳನ್ನು ಕಟ್ಟಿ ಅಪಪ್ರಚಾರ ಮಾಡುತ್ತಾರೆ. ಬೇರೆಯವರ ಮನೆಯ ಹೆಣ್ಣುಮಕ್ಕಳ ಏಳಿಗೆಯನ್ನು ಸಹಿಸದ ಈ ಗುಣವು ಅವರ ಆಂತರಿಕ ಅಸೂಯೆಯನ್ನು ಸ್ಪಷ್ಟಪಡಿಸುತ್ತದೆ. ಇವರ ಮನೆಯ ಹೆಣ್ಣು ಮಕ್ಕಳು ಅದೇ ಹಾದಿಯಲ್ಲಿ ಇರುತ್ತಾರೆ. ಅವಮಾನ ಅವಹೇಳನ ಅನುಭವಿಸಿದರು ತಿರುಗಿಸಿ ಮಾತಾಡುತ್ತಾರೆಂಬ ಅದರ ಸಣ್ಣ ಜ್ಞಾನ ಇರುವುದಿಲ್ಲ. ತಿರುಗಿಸಿ ಉತ್ತರಿಸಬೇಕು ಆಗ ಜನ ಹದ್ದು ಬಸ್ತಿನಲ್ಲಿ ಇರುತ್ತಾರೆ. ಇದು ಕಲಿಯುಗ ಕರ್ಮ ಏಟಿನ ಜೊತೆ ನಮ್ಮ ಏಟು ಅಗತ್ಯ ಇದೆ.

  1. ಅಸೂಯೆ ಮತ್ತು ವಾಮಾಚಾರದಂತಹ ಕೃತ್ಯಗಳು

ಇತರರು ತಮಗಿಂತ ಮೇಲ್ಮಟ್ಟಕ್ಕೆ ಬೆಳೆಯಬಾರದು, ಒಳ್ಳೆಯ ಮನೆತನಕ್ಕೆ ಸೇರಿ ನೆಮ್ಮದಿಯಿಂದ ಇರಬಾರದು ಎನ್ನುವ ವಿಕೃತ ಆಸೆ ಇಂತಹವರಲ್ಲಿ ತೀವ್ರವಾಗಿರುತ್ತದೆ. ಬೇರೆಯವರ ಸಂತೋಷ ಮತ್ತು ಅಭಿವೃದ್ಧಿಯನ್ನು ಕಂಡು ಒಳಗೊಳಗೇ ಕುದಿಯುವ ಇವರು, ಇತರರ ಸಂಸಾರವನ್ನು ಹಾಳುಮಾಡಲು ಯಾವುದೇ ಹಂತಕ್ಕೂ ಇಳಿಯುತ್ತಾರೆ. ಪ್ರತ್ಯಕ್ಷವಾಗಿ ಜಗಳವಾಡಲು ಧೈರ್ಯವಿಲ್ಲದಿದ್ದಾಗ, ಕಂಡಕಂಡವರ ಕೈಯಲ್ಲಿ ವಾಮಾಚಾರ, ಗೂಢ ತಂತ್ರಗಳು ಅಥವಾ ಚಾಡಿ ಮಾತುಗಳ ಮೂಲಕ ಇನ್ನೊಬ್ಬರ ಮನೆಯಲ್ಲಿ ಬೆಂಕಿ ಇಡುವ ಕೆಲಸಕ್ಕೆ ಕೈಹಾಕುತ್ತಾರೆ. ಅಸೂಯೆಯಿಂದ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಅನೈತಿಕ ಸಂಬಂಧಕ್ಕೂ ಇಳಿಯುತ್ತಾರೆ. ತಪ್ಪು ಮಾಡಿ ನಾನು ಸಾಚಾ ಎಂದು ಆಳುವ ನಾಟಕ ಆಡುತ್ತಾರೆ‌‌. ಅವರ ಆಟಗಳನ್ನು ಜನರು ಸಹ ನೋಡಿರುತ್ತಾರೆ ಎಂಬ ಸಣ್ಣ ಅರಿವು ಇರುವುದಿಲ್ಲ. ಕಳ್ಳನ ಮನಸು ಯಾವಾಗಲೂ ಉಳ್ಳುಳ್ಳು ಆಗಿರುತ್ತದೆ. ಅಂತವರು ಬಂದು ಧೈರ್ಯವಾಗಿ ನಾನು ಮಾಡಿಲ್ಲ! ಎಂದು ಹೇಳುವುದಿಲ್ಲ ಕಾರಣ ಅವರು ಆಡಿದ ನೀತಿ ಹೀನ ಕೆಲಸಗಳು ಅವರಿಗೂ ಗೊತ್ತಿರುತ್ತದೆ.

  1. ಸಮಾಜದ ಮೇಲಾಗುವ ದುಷ್ಪರಿಣಾಮ ಮತ್ತು ಪರಿಹಾರ

ಇಂತಹ ವ್ಯಕ್ತಿಗಳು ಮತ್ತು ಅವರ ಮನಸ್ಥಿತಿಯು ಸಮಾಜದಲ್ಲಿ ಧರ್ಮ, ಸಂಸ್ಕೃತಿ ಹಾಗೂ ನೈತಿಕತೆಯ ಹೆಸರಿನಲ್ಲಿ ವಿಷವನ್ನು ಹರಡುತ್ತವೆ. ಬೇರೆಯವರ ಲೋಪದೋಷಗಳನ್ನು ಹುಡುಕಿ ಆನಂದಿಸುವ ಬದಲು, ಪ್ರತಿಯೊಬ್ಬರೂ ತಮ್ಮ ಅಂತರಂಗವನ್ನು ಒಮ್ಮೆ ತಿರುಗಿ ನೋಡಿಕೊಳ್ಳುವುದು (ಆತ್ಮಾವಲೋಕನ) ಅತ್ಯಗತ್ಯ. ನಿಮ್ಮ ಹೀನ ನಾಲಿಗೆ, ಮನಸು, ಹೀನ ಕೆಲಸಗಳಿಗೆ ಅತಿದೊಡ್ಡ ಬೆಲೆ ತೆರಬೇಕಾಗುತ್ತದೆ.

  • ಆತ್ಮಾವಲೋಕನ: ಬೇರೆಯವರ ಕಣ್ಣಿನ ಕಸವನ್ನು ಹುಡುಕುವ ಮುನ್ನ, ತಮ್ಮ ಮನೆಯ ಕಣ್ಣಿನ ಕಸ ತೆಗೆಯುವುದು ಬುದ್ಧಿವಂತಿಕೆ.
  • ಶ್ರಮದ ಗೌರವ: ರೈತರಾಗಲಿ ಅಥವಾ ಯಾವುದೇ ವೃತ್ತಿಯವರಾಗಲಿ, ವ್ಯಕ್ತಿಯ ಗುಣ ಮತ್ತು ನಡತೆಗೆ ಮೊದಲ ಆದ್ಯತೆ ನೀಡಬೇಕು. ತಮ್ಮ ಮನೆಯ ಹೆಣ್ಣು ಮಕ್ಕಳು ಇಂಜಿನಿಯರ್ ಆಗಿರಲಿ ಬಡ ರೈತನಿಗೆ ಕೊಟ್ಟು ಮದುವೆ ಮಾಡುವ ಮಾತಿನಂತೆ ನಡೆ ಇರಬೇಕು. ಇಲ್ಲದೇ ಹೋದರೆ ಬೇರೆಯವರಿಗೆ ಭಾಷಣ ಹೇಳಲು ಹೋಗಬಾರದು.
  • ಸಮಾನತೆ: ತಮ್ಮ ಮಕ್ಕಳಿಗೆ ನೀಡುವ ಸ್ವಾತಂತ್ರ್ಯ ಮತ್ತು ಗೌರವವನ್ನು ಇತರರ ಮಕ್ಕಳಿಗೂ ನೀಡುವ ಉದಾರತೆ ಇರಬೇಕು. ನಿಮ್ಮ ಯೋಗ್ಯತೆ ತಕ್ಕಂತೆ ನಿಮ್ಮ ವರ್ತನೆ ನಿರ್ಧಾರವಾಗುತ್ತದೆ.

ಒಟ್ಟಾರೆ ಜಗತ್ತಿನ ನಿಯಮದಂತೆ, ನಾವು ಇತರರಿಗೆ ಏನು ಬಯಸುತ್ತೇವೋ ಅಥವಾ ಏನು ಮಾಡುತ್ತೇವೋ, ಅದು ಅನುಕ್ರಮವಾಗಿ ನಮಗೇ ಮರಳಿ ಬರುತ್ತದೆ. ಕರ್ಮ ನೀನು ಬೇರೆಯವರ ಮನೆಗೆ ಏನು ಮಾಡಿದ್ದೋ ಅದೇ ನಿನ್ನ ಮನೆಯ ಹೆಣ್ಣು ಮಕ್ಕಳಿಂದ ತಿರುಗುತ್ತದೆ. ಇತರರ ಜೀವನವನ್ನು ಹಾಳುಮಾಡಲು ಯತ್ನಿಸುವವರು ಮತ್ತು ಸೋಗಲಾಡಿತನದ ಮುಖವಾಡ ಧರಿಸಿ ಬದುಕುವವರು ಅಂತಿಮವಾಗಿ ತಾವೇ ತೋಡಿದ ಹಳ್ಳಕ್ಕೆ ಬೀಳುತ್ತಾರೆ. ಧರ್ಮ, ಸದ್ಗುಣ ಮತ್ತು ಪವಿತ್ರತೆಯ ನಟನೆಯನ್ನು ಬಿಟ್ಟು, ನೈಜ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳನ್ನು ಗೌರವಿಸಿದಾಗ ಮಾತ್ರ ವ್ಯಕ್ತಿತ್ವಕ್ಕೂ ಗೌರವ ಮತ್ತು ಸಮಾಜಕ್ಕೂ ಶ್ರೇಯಸ್ಸು ಉಂಟಾಗುತ್ತದೆ. ಜನರು ಎಲ್ಲವನ್ನು ನಂಬುವುದಿಲ್ಲ ಅವರಿಗೂ ಕೀಳಾಗಿ ಮಾತಾಡುವರ ಯೋಗ್ಯತೆ ತಿಳಿದಿರುತ್ತದೆ. ಹಾಗಾಗಿ ಪರರ ಬೆಳವಣಿಗೆ ಮೇಲೆ, ಅವರ ಜಾತಿ ಜನಾಂಗ ಮೇಲೆ ಹರಿಹಾಯುವ ಮೊದಲು ನಿಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ಕಣ್ಣು ಇಡಿ, ಮೇಲು ಜಾತಿ ಎಂದು ಹೇಳುವ ಮೊದಲು ನಿಮ್ಮ ಜಾತಿಗೆ ತಕ್ಕಂತೆ ಮೇಲು ಗುಣಗಳಿಂದ ವರ್ತಿಸಿ. ನಿಮ್ಮ ಕೀಳು ವರ್ತನೆ ನಿಮ್ಮ ಮನೆಯ ಅಧಃಪತನಕ್ಕೆ ದಾರಿಯಾಗಿರುತ್ತದೆ. ಯೋಚಿಸಿ, ಚಿಂತಿಸಿ!! ಪರರ ಮನೆಗೆ ದ್ರೋಹ ಬಗೆಯುವ ಬದಲು ಪರರ ಬದುಕಿಗೆ ದೋಣಿಯಾಗಿ. ಇಲ್ಲದೇ ಹೋದರೆ ನಿಮ್ಮ ಮನೆಯೇ ಕರ್ಮದ ಏಟಿಗೆ ಚಿದ್ರವಾಗುತ್ತದೆ.

(-ಬಿಂದು ಆರ್.ಡಿ.ರಾಂಪುರ,
ಲೇಖಕರು, ಕಾರ್ಯದರ್ಶಿ,
ಶರಣ ಸಾಹಿತ್ಯ ಪರಿಷತ್ತು,
ದಾವಣಗೆರೆ ತಾ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments