ದಾವಣಗೆರೆ:
ನೂತನವಾಗಿ ನಿರ್ಮಿಸಿರುವ ಕ.ರಾ.ರ.ಸಾ.ಸಂಸ್ಥೆಯ علو ನಿಲ್ದಾಣಕ್ಕೆ ಎಂ.ಪಂಪಾಪತಿಯವರ. ಹೆಸರನ್ನು ನಾಮಕರಣ ಮಾಡಲು ಒತಾಯಿಸಿ ನಮ್ಮ ಜೈ ಕರುನಾಡ ವೇದಿಕೆ ಸಂಘಟನೆಯು ದಾವಣಗೆರೆಯಲ್ಲಿ ಹೋರಾಟ ನಡೆಸಿ ಮನವಿ ಸಲ್ಲಿಸಿದ್ದರು.
ನಗರದ ಪಿಬಿ ರಸ್ತೆಯಲ್ಲಿ ನೂತನವಾಗಿ * ನಿರ್ಮಾಣವಾಗುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಪಂಪಾಪತಿಯವರ ಹೆಸರಿಡಬೇಕೆಂದು ಉಪವಿಭಾಗಾಧಿಕಾರಿ ಕಚೇರಿವರೆಗೂ ಮೆರವಣಿಗೆ ಮೂಲಕ ಆಗಮಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ವೇಳೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥಗೌಡ ಮಾತನಾಡಿ ಸರಿಸುಮಾರು ಮೂರು ದಶಕಗಳ ಕಾಲ ಕಾರ್ಮಿಕರ, ಸಮುದಾಯದ – ಪ್ರಾಮಾಣಿಕ ನೇತಾರರಾಗಿದ್ದ ಕಾಂ ಪಂಪಾಪತಿಯವರು ಶಾಸಕರಾದ ಸಂದರ್ಭದಲ್ಲಿ ಪ್ರಸ್ತುತ ನೂತನವಾಗಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ಅಂದು ಮಂಜೂರಾತಿ ಪಡೆದು ನಿರ್ಮಾಣವಾಗಿತ್ತು ಎಂಬುದು ಸ್ಮರಣೀಯ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ವಂತೆ ಡಿಪೋ ಇಲ್ಲದ ಕಾಲದಲ್ಲಿ ತಮ್ಮ ಅವಿರತ ಹೋರಾಟದಿಂದ ಡಿಪೋ ಮಂಜೂರಾತಿಗೆ ಪ್ರಯತ್ನ ನಡೆಸಿದ್ದು ಮಾತ್ರವಲ್ಲದೇ ಸ್ಥಳೀಯವಾಗಿ ಬಸ್ ನಿಲ್ದಾಣದ ಕೊರತೆ ನೀಗಿಸಲು ಕಾಲಕ್ಕೆ ಈಗಿನ ಸ್ಥಳದಲ್ಲಿ ಅನ್ವಯವಾಗುವಂತಹ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಪಂಪಾಪತಿಯವರು
ಶಾಸಕರಾಗಿದ್ದ ಸಂದರ್ಭದಲ್ಲಿ ಎಂದರು. ದಿನೇ ದಿನೇ ಪ್ರಗತಿಯನ್ನು ಹೊಂದುತ್ತಿದ್ದ ನಗರ ಹಾಗೂ
ನಗರ ನಿವಾಸಿಗಳ ಅಗತ್ಯ ಹಾಗೂ ಅವಶ್ಯಕವಾಗಿದ್ದ ನಗರ ಸಂಚಾರಿ ಬಸ್ಸುಗಳಿಗಾಗಿ, ಸರ್ಕಾರವನ್ನು ಶಾಸಕರಾಗಿಯೂ ಒತ್ತಾಯಿಸಲು ದಾವಣಗೆರೆ ನಗರಕ್ಕೆ ನಗರ ಸಂಚಾರಿ ಬಸ್ ಪ್ರಾರಂಭಿಸಲು ಅಂತಿಮವಾಗಿ ‘ಆಮರಣ ಉಪವಾಸ ಸತ್ಯಾಗ್ರಹ ನಡೆಸಿ ಅಂತಿಮವಾಗಿ ಸರ್ಕಾರ ನಗರ ಸಾರಿಗೆ ಬಸ್ ಒದಗಿಸಲು ಪ್ರಯತ್ನ ಮಾಡಿದ ಕಾಂ. ಪಂಪಾಪತಿಯವರನ್ನು ಈ ಸಂದರ್ಭದಲ್ಲಿ ಮರೆತು ಬಿಡುವುದು ಸಮಂಜಸವಾದುದಲ್ಲ
ಆದ್ದರಿಂದ ನಿರ್ಮಾಣವಾಗಿರುವ ನೂತನ ಬಸ್ ನಿಲ್ದಾಣಕ್ಕೆ ‘ಕಾಂ.ಪಂಪಾವತಿ ಬಸ್ ನಿಲ್ದಾಣ” ಎಂಬುದಾಗಿ ನಾಮಕರಣ ಮಾಡಿ ಅವರ ನೈಜ ಸಮಾಜ ಸೇವೆಯನ್ನು ಗೌರವ ಪೂರ್ವಕವಾಗಿ ಸ್ಮರಿಸಬೇಕಿದೆ. ಸರ್ಕಾರ ಈ ವಿಚಾರದಲ್ಲಿ ಸೂಕ್ತ ನಿರ್ಣಯಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿ. ಅಲ್ಬರ್ಟ್ ಅಂಟೋನಿ, ಮಹಮದ್ ಆನಂದ್ ಗಿರೀಶ್,ಮಮತಾ ರೋಹಿತ್ ಮತ್ತಿತರರಿದ್ದು ಅವರೆಲ್ಲರ ಹೋರಾಟದ ಪಲದಿಂದ ಈಗ ಜಿಲ್ಲಾ ಉಸ್ತುವಾರಿ ಸಚಿವರು ಕಾಮ್ರೇಡ್ ಪಂಪಾಪತಿಯವರರ ಹೆಸರು ಇಡಲಾಗುವುದೆಂದು ಹೇಳಿದ್ದಾರೆ. ಸಚಿವರಿಗೆ “ನಮ್ಮ ಜೈ ಕರುನಾಡವೇದಿಕೆ”ಸಂಘಟನೆಯು ಅಭಿನಂದಿಸುತ್ತದೆಂದು ಸಂಘದ ಅಧ್ಯಕ್ಷ ಮಂಜುನಾಥಗೌಡ ರವರು ತಿಳಿಸಿದ್ದಾರೆ.

