ದಾವಣಗೆರೆ:
ದಾವಣಗೆರೆಯ ದೊಡ್ಡಪೇಟೆಯಲ್ಲಿರುವ ಶ್ರೀ ಗಣೇಶ ದೇವಸ್ಥಾನದಲ್ಲಿ ವಿನಾಯಕ ಮಹೋತ್ಸವದ ಪ್ರಯುಕ್ತ ಈ ಬಾರಿ ಹೊಸ ನೋಟುಗಳನ್ನು ಹಾಗೂ ನಾಣ್ಯಗಳನ್ನು ಬಳಸಿ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.
ಸೆ.16ರ ಬುಧವಾರ ರಾತ್ರಿ7-30ರಿಂದ ಹಿನ್ನೆಲೆ ಗಾಯಕಿ ಶಿವಮೊಗ್ಗದ ಶ್ರೀಮತಿ ಸುರೇಖಾ ಹೆಗಡೆ ಮತ್ತು ತಂಡದವರಿಂದ ಸುಗಮ ಸಂಗೀತ, ಸೆ.17ರ ಗುರುವಾರ ಬೆಂಗಳೂರಿನ ಶ್ರೀಮತಿ ಸವಿತಕ್ಕ ಮತ್ತು ತಂಡದವರಿಂದ ಜಾನಪದ ಸಂಭ್ರಮ ನಡೆಯಲಿದೆ.
ಸಾರ್ವಜನಿಕ ವೀಕ್ಷಣೆಗೆ ಸೆ.18ರ ಶುಕ್ರವಾರ ಕೊನೆಯ ದಿನವಾಗಿದ್ದು ಅಂದು ಸಂಜೆ 6 ಗಂಟೆಗೆ ಮಯೂರ ರಥದಲ್ಲಿ ಮಂಗಲವಾದ್ಯದೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ದು ವಿಸರ್ಜಿಸಲಾಗುವುದು. ಸೆ.19ರ ಶನಿವಾರ ಮಧ್ಯಾಹ್ನ 12-30ರಿಂದ ಅನ್ನ ದಾಸೋಹ ನಡೆಯಲಿದೆ ಎಂದು ದೊಡ್ಡಪೇಟೆಯ ಶ್ರೀ ವಿನಾಯಕ ದೇವಸ್ಥಾನದ ಸೇವಾ ಸಂಘ ಟ್ರಸ್ಟ್ ನವರು ತಿಳಿಸಿದ್ದಾರೆ.

