ಚಿಕ್ಕಮಗಳೂರು:ಚಿಕ್ಕಮಗಳೂರು ನಗರದ ಹೆಸರಾಂತ ಹಾಗೂ ಪ್ರಖ್ಯಾತ ಆಯುರ್ವೇದ ಔಷಧಿಗಳ ವಿತರಕರೂ ಸಮಾಜದ ಆರೋಗ್ಯದ ಬಗ್ಗೆ ಕಾಳಜಿಯಿಂದ ಸೇವೆ ಸಲ್ಲಿಸುತ್ತಿರುವ ಮೆಸರ್ಸ್ ಶರ್ಮಾ ಆಯುರ್ವೇದ ಭಂಡಾರ್ರವರಿಂದ ಆಸ್ತಮಾ ಖಾಯಿಲೆಗೆ ಔಷಧಿ ವಿತರಣೆಯ ಕಾರ್ಯಕ್ರಮವನ್ನು ಏರ್ಪಡಿಸಿರುತ್ತಾರೆ. ಇದು ಈ ಸಂಸ್ಥೆಯ 51ನೇ ಕಾರ್ಯಕ್ರಮವಾಗಿರುತ್ತದೆ.
ಪ್ರಸ್ತುತ ಈ ಕಾರ್ಯಕ್ರಮವನ್ನು ದಿ: 25-10-2026ನೇ ಭಾನುವಾರದಂದು ಶರದ್ ಪೂರ್ಣಿಮಾದಲ್ಲಿ ರಾತ್ರಿ 12-00ರಿಂದ 12.30ರವರೆಗೆ ಉಚಿತವಾಗಿ ಔಷಧಿಯನ್ನು ಕೊಡುವ ಕಾರ್ಯಕ್ರಮವನ್ನು ಶ್ರೀ ಗಾಯತ್ರಿದೇವಿ ಕಲ್ಯಾಣಮಂಟಪ, ಕೆಂಪನಹಳ್ಳಿ ರಸ್ತೆ, (ಕೆ.ಇ.ಬಿ.ಹತ್ತಿರ) ಚಿಕ್ಕಮಗಳೂರು ಇಲ್ಲಿ ಏರ್ಪಡಿಸಲಾಗಿದೆ.
ಈ ಔಷಧಿಯು ಅನೇಕ ರೋಗಿಗಳಿಗೆ ಆಶಾದಾಯಕವಾದ ಪರಿಣಾಮ ನೀಡಿದೆ. ಆಸ್ತಮಾ ರೋಗಿಗಳು ಈ ಔಷಧಿಯ ಸದುಪಯೋಗವನ್ನು ಪಡೆದುಕೊಳ್ಳುವುದಕ್ಕೆ ಈ ಮೂಲಕ ಕೋರುತ್ತೇವೆ.
ಸೂಚನೆ: ಔಷಧಿ ಪಡೆಯಲು ತಮ್ಮ ಹೆಸರುಗಳನ್ನು ನೊಂದಾಯಿಸಲು ಕೊನೆಯ ದಿನಾಂಕ:22-10-2026.ಆಗಿರುತ್ತದೆ.ಹೆಚ್ಚಿನ ವಿವರಗಳಿಗೆ 9844016766,ವಿನೋದ್ ಶರ್ಮ ಇವರನ್ನು ಸಂಪರ್ಕಿಸಲು ಕೋರಲಾಗಿದೆ,ಇದರ ಸದುಪಯೋಗ ಪಡೆಯಲು ಮರೆಯದಿರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

