ಜಗಳೂರು:ಪಟ್ಟಣದ ಅಶ್ವಥ್ ರೆಡ್ಡಿ ನಗರ ಬಳಿ ಇರುವ ಶ್ರೀ ರಾಘವೇಂದ್ರ ಬಡಾವಣೆ , ನಿವೇಶನದಲ್ಲಿ ವಿಕಲಚೇತನರ ರಾಜ್ಯ ಕಚೇರಿಯ ಕಟ್ಟಡದ ಬುನಾದಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮುಸ್ಟೂರು ಓಂಕಾರೇಶ್ವರ ಹುಚ್ಚನಾಗಲಿಂಗ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮತ್ತು ಕಾನಮಡುಗು ದಾಸೋಹ ಮಠ ಧರ್ಮಾಧಿಕಾರಿಗಳಾದ ಶ್ರೀ ಐಮುಡಿ ಶರಣಾರ್ಯರು ಬುನಾದಿಗೆ ಅಡಿಗಲ್ಲು ಹಾಕುವುದರ ಮೂಲಕ ಬುನಾದಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು
ಈ ಸಂದರ್ಭದಲ್ಲಿ ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಪ್ರಾಸ್ತಾವಿಕವಾಗಿ ಮಾತನಾಡಿ ವಿಕಲಚೇತನರು ಸರ್ವ ಕ್ಷೇತ್ರದಲ್ಲೂ ಅಪಾರ ಪ್ರತಿಭಾವಂತವರಾಗಿದ್ದು ವಿಶ್ವಕ್ಕೆ ಮಾದರಿಯಾಗಿ ಸಾಧನೆ ಮಾಡುತ್ತಿದ್ದಾರೆ ಅವರಿಗೆ ಕರುಣೆ ತೋರಿಸುವ ಬದಲು ಅವಕಾಶಗಳನ್ನು ನೀಡಿ ಪ್ರೋತ್ಸಾಹ ಬೆಂಬಲವನ್ನು ಕೊಡಬೇಕಿದೆ ಕಳೆದ ಐದು ವರ್ಷಗಳಿಂದ ವಿಕಲಚೇತನರ ಅಭಿವೃದ್ಧಿ ಸಂಘ ನಿರಂತರವಾಗಿ ವಿಕಲಚೇತನರ ಹಕ್ಕುಗಳು ಮತ್ತು ಸರ್ಕಾರಿ ಸೌಲಭ್ಯಗಳು ಸೇರಿದಂತೆ ಸರ್ಕಾರಿ ಕಟ್ಟಡಗಳಲ್ಲಿ ರ್ಯಾಪ್ ರೈಲಿಂಗ್ ಸ್ ಹಾಗೂ ಮಾಸಾಶನ ಹೆಚ್ಚಳ ವಿಕಲಚೇತನರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದೆ ನಿಯಮನುಸಾರವಾಗಿ ನೋಂದಣಿಯಾಗಿ ಪ್ರತಿ ವರ್ಷ ಆಡಿಟಿಂಗ್ ನಡೆಸಿ ಎಲ್ಲಾ ದಾಖಲತೆಗಳನ್ನು ಒಳಗೊಂಡು ಕಳೆದ ನಾಲ್ಕು ವರ್ಷಗಳಿಂದ ಜಗಳೂರು ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಂಘದ ಸ್ವಂತ ಕಚೇರಿ ಹೊಂದಲು ನಿವೇಶನ ಮಂಜೂರು ಮಾಡಿ ಎಂದು ಹಲವು ಬಾರಿ ಮನವಿ ನೀಡಿದರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದ ಕಾರಣ ನನ್ನ ಸ್ವಂತ ನಿವೇಶನದಲ್ಲಿ ರಾಜ್ಯಮಟ್ಟದ ವಿಕಲಚೇತನರ ಕಚೇರಿಯನ್ನು ನಿರ್ಮಾಣ ಮಾಡಲು ಇಂದು ಬುನಾದಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ ಕಟ್ಟಡದ ನಿರ್ಮಾಣಕ್ಕಾಗಿ ಹಲವು ದಾನಿಗಳು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಜಗಳೂರಿನಲ್ಲಿ ವಿಕಲಚೇತನ ರಾಜ್ಯಮಟ್ಟದ ಕಚೇರಿ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ ಎಷ್ಟೇ ಕಷ್ಟವಾದರೂ ವಿಕಲಚೇತನರ ಬದುಕಿಗೆ ಶಕ್ತಿ ತುಂಬಲು ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ ಎಂದು ಮಹಾಂತೇಶ್ ಬ್ರಹ್ಮ ತಿಳಿಸಿದರು.
ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ರಾಜ್ಯಾಧ್ಯಕ್ಷ ಮಹಾಂತೇಶ ಬ್ರಹ್ಮ ಬಹಳ ವರ್ಷಗಳಿಂದ ವಿಕಲಚೇತನರ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ ಅವರು ಸ್ವಂತ ನಿವೇಶನದಲ್ಲಿ ರಾಜ್ಯಮಟ್ಟದ ವಿಕಲಚೇತನರ ಕಚೇರಿಯನ್ನು ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಮತ್ತು ಈ ಒಂದು ಕಾರ್ಯದಿಂದ ಅವರು ತ್ಯಾಗಮೂರ್ತಿಯಾಗಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಅವರಿಗೆ ಕಚೇರಿ ಕಟ್ಟಡ ಕಟ್ಟಲು ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಲು ಮುಂದಾಗ ಬೇಕಿದೆ ಪ್ರಸ್ತುತವಾಗಿ ಬಯಲು ಸೀಮೆಯ ಜಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯಮಟ್ಟದ ವಿಕಲಚೇತನರ ಕಚೇರಿ ಕಟ್ಟಡದ ಕಾಮಗಾರಿ ನಿರ್ಮಾಣಕ್ಕೆ ಮುಷ್ಟೂರು ಮಠದಿಂದ ಐದು ಸಾವಿರ ದೇಣಿಗೆ ನೀಡುವುದಾಗಿ ತಿಳಿಸಿದರು ಜನಪ್ರತಿನಿಧಿಗಳು ಮತ್ತು ರಾಜಕೀಯ ಮುತ್ಸದ್ದಿಗಳು ಸೇರಿದಂತೆ ಸಾರ್ವಜನಿಕರು ಕಚೇರಿ ಕಟ್ಟಡದ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡುವಂತೆ ಕರೆ ಕೊಟ್ಟರು
ಐಮುಡಿ ಶರಣಾರ್ಯರು ಮಾತನಾಡಿ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಕಾನಮಡುಗು ಶ್ರೀಮಠದ ವಿದ್ಯಾರ್ಥಿಯಾಗಿದ್ದು ಅವರ ಹೋರಾಟ ಶ್ಲಾಘನೀಯವಾಗಿದೆ ನಾವು ಸ್ವಂತ ಸ್ವಂತ ನಿವೇಶನವನ್ನು ಬಂಧು-ಬಳಗದ ವರಿಗೆ ನೀಡಲು ಯೋಚಿಸುತ್ತೇವೆ ಆದರೆ ಬ್ರಹ್ಮರವರು ವಿಕಲಚೇತನರ ಅಭಿವೃದ್ಧಿ ಸಂಘಕ್ಕೆ ಮೀಸಲಾಗಿಟ್ಟು ರಾಜ್ಯಮಟ್ಟದ ಕಚೇರಿಯನ್ನು ನಿರ್ಮಾಣ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ
ಸ್ಥಳೀಯವಾಗಿ ಹಲವಾರು ಸಿಎ ನಿವೇಶನಗಳು ಇದ್ದರೂ ಸಹ ವಿಕಲಚೇತನರ ಕಚೇರಿಗೆ ನೀಡುವಲ್ಲಿ ಸರ್ಕಾರ ಎಡವಿರುವುದು ಕಂಡು ಬಂದಿದೆ ಆದರೂ ದೃತಿಗೆಡದೆ ಸಾಹಸದ ಕಾರ್ಯಕ್ಕೆ ಮುಂದಾಗಿದ್ದಾರೆ ವಿಕಲಚೇತನರಿಗೆ ನಾವು ಅನುಕಂಪ ತೋರಿಸುವ ಬದಲು ಅವಕಾಶ ಮತ್ತು ಪ್ರೋತ್ಸಾಹ ನೀಡಿದರೆ ಸಮಾಜದಲ್ಲಿ ಸರ್ವ ಸಮಾನರಾಗಿ ಬದುಕಲು ಸಹಕಾರಿಯಾಗುತ್ತದೆ ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯ ಕಚೇರಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಿ ಶ್ರೇಯೋಭಿವೃದ್ಧಿಗಾಗಿ ಶ್ರಮಿಸೋಣ ಎಂದು ತಿಳಿಸಿದರು
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಅಜ್ಜಯನಾಡಿಗರು ಮಾತನಾಡಿ ವಿಕಲಚೇತನರ ರಾಜ್ಯಮಟ್ಟದ ಕಚೇರಿ ಜಗಳೂರಿನಲ್ಲಿ ನಿರ್ಮಾಣವಾಗುತ್ತಿರುವುದು ನಮಗೆಲ್ಲರಿಗೂ ತೀವ್ರ ಸಂತೋಷ ವಾಗಿದ್ದು ಕಚೇರಿ ನಿರ್ಮಾಣಕ್ಕೆ 50 ಚೀಲ ಸಿಮೆಂಟ್ ನೀಡುವುದಾಗಿ ಹೇಳಿದರು
ಈ ಸಂದರ್ಭದಲ್ಲಿ ಮಾಜಿ ತಾಲೂಕ್ ಪಂಚಾಯತಿ ಸದಸ್ಯ ಗಡಿಮಕುಂಟೆ ಸಿದ್ದೇಶ್ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗೇಂದ್ರ ರೆಡ್ಡಿ ವೀರಶೈವ ಮಹಿಳಾ ಘಟಕದ ಅಧ್ಯಕ್ಷರಾದ ರೇಖಾ ಶಿವಕುಮಾರ್ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರಾದ ರೂಪಾವತಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಸುಜಾತಮ್ಮ ಪಲ್ಲಗಟ್ಟೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಶ್ ಗ್ರಾಮ ಪಂಚಾಯತಿ ಸದಸ್ಯ ಕಲ್ಲೇಶ್ ಶಿರಸ್ತೆದಾರರಾದ ಬದ್ರಿನಾಥ್ ಆರ್ ಐ ಕೀರ್ತಿ ಕುಮಾರ್ ಮತ್ತು ಎಂ ಎಸ್ ಪಾಟೀಲ್ ಯು ಆರ್ಡಬ್ಲ್ಯೂ ಅಣ್ಣಪ್ಪ ವಿಕಲಚೇತನ ಬೋರಣ್ಣ ಅಶ್ವಥ್ ರೆಡ್ಡಿ ನಗರ ಮಾಜಿ ನಾಮ ನಿರ್ದೇಶನ ಸದಸ್ಯ ರುದ್ರಣ್ಣ ಬಿಜೆಪಿ ಮುಖಂಡರಾದ ಬಸವರಾಜ್ ನಾಗರಾಜ್ ಅಣಬೂರ್ ಗೊಲ್ಲರಟ್ಟಿ ಪುರೋಹಿತ್ ಮಲ್ಲಿಕಾರ್ಜುನ್ ತುಮಟ್ಟಿ ಬಡಾವಣೆ ಸೇರಿದಂತೆ ಇತರರು ಇದ್ದರು

