ದಾವಣಗೆರೆ:, ಎಲ್ಲರ ಸಹಕಾರದಿಂದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ ಮಹಾನಗರ ಪಾಲಿಕೆ ಆವರಣದಲ್ಲಿ ಸಂಘದ ಕಾರ್ಯಾಲಯಕ್ಕೆ ಮಳಿಗೆ ದೊರೆತಿದೆ ಎಂದು ತಿಳಿಸಲು ಸಂತೋಷವಾಗುತ್ತದೆ. ಕಾರ್ಯಾಲಯದ ಉದ್ಘಾಟನೆಯು ದಿನಾಂಕ 19.07.2023ರ ಬುಧವಾರ ಬೆಳಿಗ್ಗೆ 11:30ಕ್ಕೆ ನಡೆಯಲಿದೆ. ಉದ್ಘಾಟನೆಯನ್ನು ಮಹಾನಗರಪಾಲಿಕೆ ಮಹಾಪೌರರಾದ ಶ್ರೀ ವಿನಾಯಕ್ ಪೈಲ್ವಾನ್ ರವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಶಿವಾನಂದ್ ಕಾಪಶಿ ಮಹಾನಗರಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾರವರು, ಹಾಗೂ ಕಾಂಗ್ರೆಸ್ ಮುಖಂಡರು ಪಾಲಿಕೆಯ ಸದಸ್ಯರಾದ ಶ್ರೀ ಎ ನಾಗರಾಜ್, ಶ್ರೀ ಗಡಿಗುಡಾಳ್ ಮಂಜುನಾಥ್, ಶ್ರೀ ಚಮನ್ ಸಾಬ್, ಶ್ರೀ ಉದಯ್ ಕುಮಾರ್, ಶ್ರೀ ಎಸ್.ಟಿ. ವೀರೇಶ್, ಶ್ರೀ ಪ್ರವೀಣ್ ಹುಲ್ಮನಿ ಹಾಗೂ ಇತರೇ ಗಣ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಶ್ರೀಯುತ ಇ.ಎಂ. ಮಂಜುನಾಥ್ ರವರು ವಹಿಸುವರು. ಕಾರ್ಯಕಾರಿ ಸಮಿತಿ ಸದಸ್ಯರು, ಸರ್ವ ಸದಸ್ಯರು, ಪತ್ರಕರ್ತ ಮಿತ್ರರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು. ಎ. ಫಕೃದ್ದೀನ್ ಪ್ರಧಾನ ಕಾರ್ಯದರ್ಶಿ ಯವರು ವಿನಂತಿಸಿಕೊಂಡಿದ್ದಾರೆ