ದಾವಣಗೆರೆ .- ಸತ್ಯ ಶುದ್ಧ ಕಾಯಕದಿಂದ ಕೂಡಿದ 12ನೇ ಶತಮಾನದ ಬಸವಣ್ಣನವರ “ಸಪ್ತ ಸೂತ್ರಗಳನ್ನು” ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಿವೃತ್ತ ಪ್ರಾಂಶುಪಾಲ ಪ್ರೊ ll ಅಮರಕಲಾ ಹಿರೇಮಠ್ ರವರು ಕರೆ ನೀಡಿದರು . ಅವರು ಲೇಬರ್ ಕಾಲೋನಿಯಲ್ಲಿರುವ ಶರಣ ನಾಗೂರು ಅಡಿವೆಪ್ಪನವರ ಮನೆಯಲ್ಲಿ ಏರ್ಪಡಿಸಿದ್ದ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅಂತರಂಗದ ಚಿತ್ ಕಳೆಯನ್ನು ಇಷ್ಟಲಿಂಗದ ಮೂಲಕ ನೀಡಿದ ಬಸವಣ್ಣನವರ ನಡೆ ನುಡಿ ಒಂದಾಗಿತ್ತು ಎಂದರು . ನಾನೆಂಬ ಅಹಂಕಾರದಿಂದ ಮನುಷ್ಯ ಹೊರ ಬರಬೇಕು ಮನುಷ್ಯನಲ್ಲಿರುವ ತನು ಗುಣಗಳಿಂದ ಹೊರಬರಬೇಕೆಂದರೆ ಬಸವಣ್ಣನವರು” ಕಾಯಕದ ಕಲ್ಪನೆ “ಯನ್ನು ಕೊಟ್ಟರು. ಇದರಿಂದ ಮನುಷ್ಯ ಸಮಾಜದ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು , “ಕಳಬೇಡ , ಕೊಲಬೇಡ , ಹುಸಿಯ ನುಡಿಯಲು ಬೇಡ ” ಎಂಬ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡು ಪ್ರಾಮಾಣಿಕ ಜೀವನ ನಡೆಸಬೇಕೆಂದರು. ಮುಂದುವರೆದು ಮಾತನಾಡುತ್ತ ನೀವು ಏನೇ ಕೆಲಸ ಮಾಡಿದರೂ ನಿಷ್ಠೆ. ಪ್ರಮಾಣಿಕತೆಯಿಂದ ಮಾಡಿ. ಮತ್ಸರ ಭಾವನೆಯಿಂದ ಮನುಷ್ಯ ಹೊರ ಬರಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ ಮೇಷ್ಟ್ರು ಮಾತನಾಡುತ್ತಾ 12ನೇ ಶತಮಾನದ ಶ್ರೀ ಬಸವಣ್ಣನವರ ಅನುಭವ ಮಂಟಪದ ಕಲ್ಪನೆ ಯಂತೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಪಾರ್ಲಿಮೆಂಟ್ ನಿರ್ಮಿಸಿ. ಸಪ್ತಸೂತ್ರಗಳನ್ನು ಗೋಡೆಯ ಮೇಲೆ ಬರಸಿ ಹಾಕಿದ್ದಾರೆ, ಇದು ಶ್ಲಾಘನೀಯ ವೆಂದರು . ಇದೇ ಸಂದರ್ಭದಲ್ಲಿ ಬಸವಣ್ಣನವರ ವಚನಗಳನ್ನು ಹೇಳಿ ಅದರ ಅರ್ಥ ವಿವರಿಸಿದರು. ನ್ಯಾಯವಾದಿ ಅಶೋಕ ಬಣಕಾರ್ ರವರು ಮಾತನಾಡಿ ಮನಸ್ಸಿನ. ಮಲೀನ ಹೋಗಲಾಡಿಸಲು ಬಸವಣ್ಣನವರ ವಚನಗಳನ್ನು ಪಾಲಿಸಬೇಕು, ಶುದ್ಧ ಕಾಯಕದಲ್ಲಿ ನಾವೆಲ್ಲರೂ ಭಾಗಿಯಾಗಬೇಕು ಅಂದಾಗ ಮನಸ್ಸು ಪ್ರಫುಲ್ಲವಾಗಿರುತ್ತದೆ ಎಂದರು. ಶ್ರೀಮತಿ ಭುವನೇಶ್ವರಿ ತಾಯಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ವಿರಪ್ಪ ಎಂ ಭಾವಿ, ಶ್ರೀ ಅನ್ನದಾನೀಶ್ವರ ಮಠದ ಉಪಾಧ್ಯಕ್ಷ ಅಮರಯ್ಯ ಗುರುವಿನ ಮಠ ಪ್ರಧಾನ ಕಾರ್ಯದರ್ಶಿ N ಅಡಿವೆಪ್ಪ ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆರಂಭದಲ್ಲಿ ಶ್ರೀಮತಿ ವೇದಾ, ಶ್ರೀಮತಿ ಶಿವಲೀಲಾ, ಇವರುಗಳು ಶ್ರೀ ಬಸವ ಧ್ವಜಾರೋಹಣ ಮಾಡಿದರೆ , ಶ್ರೀಮತಿ ವೀಣಾ ಮಂಜುನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಅಂತ್ಯದಲ್ಲಿ ನಾಗೂರು ಅಡಿವೆಪ್ಪ ಇವರು ವಂದಿಸಿದರು,