ಚುನಾವಣೆಯ ಸೋಲಿನಿಂದ Physical pain and mental shock ಗೆ ಒಳಗಾಗಿರುವ ಡಾ. ಮುರಗೇಶ ನಿರಾಣಿ ಅವರಿಗೆ ಉತ್ತಮ ಚಿಕಿತ್ಸೆಗಾಗಿ ಸಹಾಯಾರ್ಥವಾಗಿ ಬೀಳಗಿ ಪಟ್ಟಣದಲ್ಲಿ ದಿನಾಂಕ 28.08.2023 ರಂದು ಬೆಳಿಗ್ಗೆ 11 ಘಂಟೆಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಛೇರಿ ವರೆಗೆ #ಬೀಕ್ಷಾಟನೆ_ಅಭಿಯಾನದ ಮೂಲಕ ಹಣ ಸಂಗ್ರಹಿಸಿ ಅಂಚೆ ಇಲಾಖೆಯ Money Order ಮೂಲಕ ಹಣ ಸಂದಾಯ.
ಮಾಜಿ ಮಂತ್ರಿಗಳಾದ ಡಾ. ಮುರಗೇಶ ನಿರಾಣಿ ಅವರು ನನಗೆ Legal notice ಜಾರಿ ಮಾಡಿ ಚುನಾವಣೆಯ ಸಂದರ್ಭದಲ್ಲಿ ನಾನು ಮಾಡಿದ ಭಾಷಣ, ಪೇಸ್ ಬುಕ್ ಪೋಸ್ಟ್ ನಿಂದ Physical pain and mental shock ಆಗಿ 5 ಕೋಟಿ ರೂಪಾಯಿ ಪರಿಹಾರದ ಜೊತೆಗೆ ಕ್ಷಮಾಪಣೆ ಕೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಪ್ರತಿ ಹೇಳಿಕೆಯನ್ನು ನನ್ನ ವಕೀಲರ ಮೂಲಕ ಸಲ್ಲಿಸಿದ್ದೇನೆ. ಈ ವಿಷಯವಾಗಿ ಬಾಗಲಕೋಟೆ ಪತ್ರಿಕಾ ಭವನದಲ್ಲಿ ಶ್ರೀ ಯಲ್ಲಪ್ಪಹೆಗಡೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ .