ದಾವಣಗೆರೆ:ಕನ್ನಡ ಭವನದಲ್ಲಿ ದಾವಣಗೆರೆ ಜಿಲ್ಲಾ ವರದಿಗಾರ ಕೂಟದ ಸಹಯೋಗದಲ್ಲಿ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾವಣಗೆರೆ ಉಸ್ತುವಾರಿ ಸಚಿವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಉದ್ಘಾಟನೆ ನೆರವೇರಿಸಿ
ವರದಿಗಾರರಿಗೆ ಸೈಟ್ ಗಳು ಈಗಾಗಲೇ ಇವೆ
ಆದರೆ ನಮ್ಮ ಪತ್ರಕರ್ತರು ಕುಟುಂಬ ಸಮೇತ
ಆಟೋಟ ಕಾಲ ಕಳೆಯಲು ರಿಕ್ರಿಯೇಷನ್ ಕ್ಲಬ್
ಬೆಂಗಳೂರು ಪ್ರೆಸ್ ಕ್ಲಬ್ ಥರ ಮಾಡಿದಲ್ಲಿ
ನಿವೇಶನ ಸಹಿತ ಉತ್ತಮ ಕಟ್ಟಡ ನಿರ್ಮಾಣ
ಕಾರ್ಯ ಕೈಗೆತ್ತಿಕೊಳ್ಳಲು ಸಹಕರಿಸುವ ಭರವಸೆ ನೀಡಿದರು.
ಶ್ರೀ ಬಸವಪ್ರಭು ಸ್ವಾಮಿ ಗಳು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಮುಖ್ಯಮಂತ್ರಿ ಆಪ್ತ ಮಾಧ್ಯಮ ಸಲಹೆಗಾರ ಪ್ರಭಾಕರ್
ಇನ್ ಸೈಟ್ಸ್ ಕಮ್ಯೂನಿಟಿ ಸ್ಥಾಪಕ ದಾವಣಗೆರೆ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ವಿನಯ್ ಕುಮಾರ್
ವರದಿಗಾರ ಕೂಟದ ಅಧ್ಯಕ್ಷ ಕೆ ಏಕಾಂತಪ್ಪ, ದಾವಣಗೆರೆ ವಿವಿ ಪತ್ರಿಕೋದ್ಯಮ ವಿಭಾಗದ ಶಿವಕುಮಾರ್ ಕಣಸೋಗಿ, ವಾರ್ತಾಧಿಕಾರಿ ಧನಂಜಯ, ಹಿರಿಯ ಪತ್ರಕರ್ತ ಬಿ ಎನ್ ಮಲ್ಲೇಶ್
ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ ಟಿ ವಿ ೯ದೊಡ್ಡಮನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು
ಸಚಿವರು ಒಂಭತ್ತು ಜನ ಪತ್ರಿಕೆ ಯಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತ ರೊಂದಿಗೆ ಮಾಧ್ಯಮ ಶ್ರಿ ಪ್ರಶಸ್ತಿ ಪ್ರದಾನ ಮಾಡಿದರು.