Thursday, August 21, 2025
Homeಸಂಸ್ಕೃತಿರೇವಣಸಿದ್ದೇಶ್ವರ ಮಹಿಳಾ ಜ್ಞಾನವಿಕಾಸ ಕೇಂದ್ರದ  ವಾರ್ಷಿಕೋತ್ಸವ

ರೇವಣಸಿದ್ದೇಶ್ವರ ಮಹಿಳಾ ಜ್ಞಾನವಿಕಾಸ ಕೇಂದ್ರದ  ವಾರ್ಷಿಕೋತ್ಸವ

ಮೂಡಲಗಿ:ಸ,07- ತಾಲೂಕಿನ ಹುಣಶ್ಯಾಳ ವಲಯದ  ಸಂಗನಕೇರಿ ಕಾರ್ಯಕೇತ್ರದ  ರೇವಣಸಿದ್ದೇಶ್ವರ ಮಹಿಳಾ ಜ್ಞಾನವಿಕಾಸ ಕೇಂದ್ರದ  ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಅರಭಾವಿ ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ ಸಂಪಗಾವಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

        ಧರ್ಮಸ್ಥಳ ಯೋಜನೆಯಿಂದ ಮಹಿಳೆಯರಿಗಾಗಿ ಪ್ರತಿಯೊಂದು ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಯೋಜನೆಯಾಗಿದ್ದು  ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗಿದೆ ಇದರ ಸಫಲತೆ ಪಡೆದುಕೊಂಡು ಉತ್ತಮ ಮಹಿಳೆಯಾಗಿ ಬೆಳೆಯಬೇಕು ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಕಸಪ್ಪ ಕೋಳಿ ಗ್ರಾಮ ಪಂಚಾಯತ್ ಸದಸ್ಯರು, ಜಯಶ್ರೀ ಬೋಸಲೇ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದು ತಾಲೂಕು  ವಿಚಕ್ಷಣೆ ಅಧಿಕಾರಿಗಳಾದ ರಾಮು ಅವರು ಕೇಂದ್ರದ ಹಾಜರಾತಿ ಗುಣಮಟ್ಟ ಬಗ್ಗೆ ಮಾಹಿತಿ ನೀಡಿ ಕೇಂದ್ರದ ಆಡಿಟ್ ಮಾಡಿದರು.

       ಈ ಕಾರ್ಯಕ್ರಮದಲ್ಲಿ  ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಶ್ರದ್ಧಾ ಮಂಜುನಾಥ್ ಕಮ್ಮಾರ ವಲಯದ ಮೇಲ್ವಿಚಾರಕರು ಮಂಜುಳಾ  ಸೇವಾಪ್ರತಿನಿಧಿಗಳು ದೀಪಾ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments