Saturday, December 21, 2024
Homeಸಂಸ್ಕೃತಿಬಡವರಿಗೆ ಹಣದ ರೂಪದಲ್ಲಿ ಬೆಳಕಾದ ಸಂಘ ಶಿವಾನಂದ ಸ್ವಾಮೀಜಿಗಳು

ಬಡವರಿಗೆ ಹಣದ ರೂಪದಲ್ಲಿ ಬೆಳಕಾದ ಸಂಘ ಶಿವಾನಂದ ಸ್ವಾಮೀಜಿಗಳು

ಮೂಡಲಗಿ:ಸ,11-ಹಳ್ಳೂರ ಗ್ರಾಮದಲ್ಲಿ ಬಡವ ದಿನದಲಿತರ ಬಾಳಿಗೆ ಬೆಳಕಾಗಿ ಸಂಘದ ರೂಪದಲ್ಲಿ ಹಣ ನೀಡಿ ಸುಖ ಜೀವನವನ್ನು ನಡೆಸಲು ಸನ್ಮಾರ್ಗ ತೋರುವ ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿಗಳು ಹೇಳಿದರು.                                         ಅವರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ರಂಗ ಮಂಟಪದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಆಶ್ರಯದಲ್ಲಿ ನಡೆದ ನೂತನ ಸ್ವ ಸಹಾಯ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ಪಾಲಾನುಭವಿಗಳಿಗೆ ವಿವಿಧ ಸಲಕರಣೆ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಾಡಿನ ಜನತೆಯ ಅನುಕೂಲಕ್ಕಾಗಿ ಗ್ರಾಮಾಭಿವೃದ್ಧಿವು ಯೋಜನೆಗಳ ಮೂಲಕ ಹಲವಾರು ರೀತಿಯ ಅಂಶಗಳನ್ನು ಅನುಷ್ಟಾನಗೊಳಿಸಿ ಮಾದರಿಯಾಗಿರುವ ಸಂಸ್ಥೆಯ ಎಳ್ಗೆಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದರು ಸಂಸ್ಥೆಯು ಉತ್ತರೋತ್ತರವಾಗಿ ಬೆಳೆಯಲೆಂದು ಶುಭ ಹಾರೈಸಿದರು.                              ಗ್ರಾ ಯೋ ಜಿಲ್ಲಾ ನಿರ್ದೇಶಕರಾದ ನಾಗರತ್ನಾ ಹೆಗಡೆ ಮಾತನಾಡಿ ಕಳೆದ 45 ವರ್ಷಗಳಿಂದ ಧರ್ಮಸ್ಥಳ ಸಂಸ್ಥೆಯು ಜನರಿಗೆ ಒಳ್ಳೆಯ ಸೇವೆ ಸಲ್ಲಿಸುತ್ತಿದೆ. ಹಣದ ರೂಪದಲ್ಲಿ ಸಂಘಗಳಿಗೆ ನೀಡಿದ ಹಣವು ವ್ಯರ್ಥ ಮಾಡದೆ ಸದುಪಯೋಗ ಪಡೆದುಕೊಳ್ಳಬೇಕು. ಸಂಘ ದಿಂದ ಉಳಿತಾಯ ಮಾಡಿಕೊಂಡು ಸುಖ ಜೀವನ ನಡೆಸರಿ.ವಿಕಲಚೇತನರು ಬಡ ವಿದ್ಯಾರ್ಥಿಗಳಿಗೆ ಸ್ಕಾಲರ ಸಿಪ್ ವೃತ್ತಿ ಪರ ಕೋರ್ಸ್ ಕಲಿಯಲು ಹಣದ ರೂಪದಲ್ಲಿ ಸಹಾಯ ಸಹಕಾರ ನಮ್ಮ ಸಂಸ್ಥೆಯು ನೀಡುತ್ತಿದೆ ಎಂದರು.                                                        ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ ಮಾತನಾಡಿ ಸಂಘದಲ್ಲಿ ಸರ್ವ ಸದಸ್ಯರು ಹೊಂದಾಣಿಕೆ ಮಹತ್ವದ್ದು. ಜಾತಿ ಮೇಲು ಕೀಳು ಲೆಕ್ಕಿಸದೆ ಭಾರತೀಯ ಸಂಸ್ಕೃತಿಯನ್ನೂ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ ಸಮಾಜ ನಾಡಿಗೆ ಕೀರ್ತಿ ತರುವ ಕಾರ್ಯ ಮಾಡುತ್ತಿದೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.                                                                ವಿಲ್ ಚೇರ್, ಸ್ಟಿಚ್, ವಾಟರ ಬೆಡ್, ವಾಕರ್ ಸಲಕರಣೆಗಳನ್ನು ಪಲಾನುಭವಿಗಳಿಗೆ ವಿತರಿಸಿದರು.          ಈ ಸಮಯದಲ್ಲಿ ಶಾಸಕರ ಆಪ್ತ ಸಹಾಯಕ ದಾಸಪ್ಪ ನಾಯ್ಕ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಮಲ್ಲಪ್ಪ ಹೊಸಟ್ಟಿ. ಉಪಾಧ್ಯಕ್ಷೆ ಜಯಶ್ರೀ ಮಿರ್ಜಿ. ಮಾಜಿ ಜಿ ಪ ಸ ಹಾಗೂ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ. ಗ್ರಾಮ ಪ ಸದಸ್ಯ ಹಣಮಂತ ತೇರದಾಳ. ಮಾಜಿ ಗ್ರಾಮ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ. ಕಾರ್ಯದರ್ಶಿ ಮಂಜುನಾಥ ಕೋಹಳ್ಳಿ. ಪಿ ಕೆ ಪಿ ಏಸ್ ಅಧ್ಯಕ್ಷ ಸುರೇಶ ಕತ್ತಿ.  ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಕುಮಾರ ಲೋ ಕಣ್ಣವರ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಗ್ರಾಮ ಪ ಸದಸ್ಯ ಬಸವರಾಜ ಲೋಕನ್ನವರ. ಅಡಿವೆಪ್ಪ  ಪಾಲಬಾಂವಿ. ಶಿವಪ್ಪ ನಿಡೋಣಿ. ಶ್ರೀಮಂತ ಹುಚ್ಚರಡ್ಡಿ. ಮಲ್ಲಿಕಾರ್ಜುನ ಕಬ್ಬೂರ. ಬಸಪ್ಪ ಸಂತಿ. ವೆಂಕನಗೌಡ ಪಾಟೀಲ. ವಲಯ ಮೇಲ್ವಚಾರಕಿ ರೇಣುಕಾ ಟಿ. ದ್ರಾಕ್ಷಾಯಿಣಿ. ಪರಶುರಾಮ.ಹಣಮಂತ. ಮಂಜುಳಾ. ವತ್ಸಲಾ ಹೀರೆಮಠ. ಸವಿತಾ ಪೂಜೆರಿ. ಕೌಸರ ಹಣಗಂಡಿ. ಸೇರಿದಂತೆ ಹಳ್ಳೂರ, ಖಾನಟ್ಟಿ, ಶಿವಾಪೂರ, ಮುನ್ಯಾಳ, ರಂಗಾಪುರ, ಕಮಲದಿನ್ನಿ,ಮೂಡಲಗಿ ಒಕ್ಕೂಟಗಳ ಸರ್ವ ಸದಸ್ಯರು ಹಾಗೂ ಗ್ರಾಮದ ಗುರು ಹಿರಿಯರಿದ್ದರು. ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ. ಸಿದ್ದಣ್ಣ ದುರದುಂಡಿ ನಿರೂಪಿಸಿ. ರಾಜು ನಾಯ್ಕ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments