ದಾವಣಗೆರೆ:ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ದಾವಣಗೆರೆ ಜಿಲ್ಲಾ ಸಮಿತಿಗೆ ದಿನಾಂಕ:೦೯-೧೧-೨೦೨೫,ರಂದು ನಡೆಯಲಿರುವ ಚುನಾವಣೆಯಲ್ಲಿ ಎರಡಕ್ಕೂ ಹೆಚ್ಚು ಬನಗಳಾಗಿ ಸುಮಾರು ೫೫,ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಇದ್ದಾರೆ.ಇವರೆಲ್ಲರೂ ನಮ್ಮ ವೃತ್ತಿಬಾಂಧವರಿದ್ದು ಪರಸ್ಪರರು ಪ್ರತಿನಿತ್ಯ ಸ್ನೇಹ ವಿಶ್ವಾಸದಲ್ಲಿದ್ದೇವೆ.ಆದರೆ ಈ ಚುನಾವಣೆ ನಡೆಯದೆ ಪರಸ್ಪರ ಹೊಂದಾಣಿಕೆಯಿಂದಾಗಿ ಅವಿರೋಧವಾಗಿ ಆಯ್ಕೆ ಆಗಬೇಕೆಂಬ ಆಶೆಯು ಎಲ್ಲಾ ಹಿರಿಯ ಪತ್ರಕರ್ತರ ಉದ್ದೇಶವಾಗಿತ್ತು.ಹಿರಿಯಪತ್ರಕರ್ತರ ಪ್ರಯತ್ನ ವಿಫಲವಾಗಿ ಗುಂಪುಗಳಾಗಿ ಚುನಾವಣೆ ನಡೆದಿದೆ.
ಗುಂಪು ಗಳಿರಬಹುದು ಆದರೆ ಆ ಗುಂಪುಗಳಲ್ಲಿ ಸಂಘಟನಾತ್ಮಕ ಕೆಲಸಮಾಡಿ ಸಂಘದ ಅಭಿವೃದ್ಧಿಗೆ ಮತ್ತು ಪತ್ರಕರ್ತರ ಹಿತ ಬಯಸುವವರು ಎಲ್ಲಾ ಗುಂಪುಗಳಲ್ಲಿ ಹರಿದು ಹಂಚಿಹೋಗಿದ್ದಾರೆ.
ಮತ್ತು ನನ್ನನ್ನು ರಾಷ್ಟ್ರೀಯ ಮಂಡಳಿಯ ಸದಸ್ಯನನ್ನಾಗಿ ಅವಿರೋಧವಾಗಿ ಆಯ್ಕೆಮಾಡಿಕಳಿಸುವಾಗಲೂ ಎರಡೂ ಗುಂಪಿನವರು ಪರವಿರೋಧ ಚರ್ಚಿಸಿ ಒಮ್ಮತದಿಂದ ನನ್ನ ಹೆಸರನ್ನು ರಾಷ್ಟ್ರೀಯ ಮಂಡಳಿಗೆ ಸೂಚಿಸಿದ್ದಾರೆ.ಹಾಗಾಗಿ ಈಗ ಸ್ಪರ್ಧಿಸಿರುವ ಎಲ್ಲಾ ಗುಂಪುಗಳಲ್ಲಿ ನನಗೆ ಸಹಕರಿಸಿದವರಿದ್ದು ಅವರ ಸಹಕಾರದಿಂದ ನಾನು ಪ್ರಸ್ತುತ ರಾಷ್ಟ್ರೀಯ ಮಂಡಳಿಯ ಸದಸ್ಯನಾಗಿರುವುದರಿಂದ ಮತ್ತು ಮುಂದೆ ತಮ್ಮೆಲ್ಲರ ಸಹಕಾರ ಕೋರಿಕೊಳ್ಳುತ್ತೇನೆ.ಆದಕಾರಣ ಯಾವುದೇ ಒಂದು ಗುಂಪಿನ ಜೊತೆ ಗುರುತಿಸಿಕೊಳ್ಳುವುದು ನನ್ನ ಮನಸ್ಸು ಒಪ್ಪುತ್ತಿಲ್ಲವಾದ್ದರಿಂದ ಯಾವುದೇ ಒಂದು ಗುಂಪಿನಲ್ಲಿ ಗುರುತಿಸಿಕೊಳ್ಳದೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲಾ.ಯಾವ ಗುಂಪಿನವರೂ ಅನ್ಯತಾಭಾವಿಸಬೇಡಿರಿ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯು ಶಾಂಇ,ಸೌಹಾರ್ಧತೆ,ವಿಶ್ವಾಸಗಳೊಂದಿಗೆ ನಡೆದು ಇತರರಿಗೆ ಮಾದರಿಯಾಗಲಿ ಎಂದು ಬಯಸುತ್ತೇನೆ.ಆದರೆ ನವೆಂಬರ್ ಒಂಭತ್ತರಂದು ನಡೆಯಲಿರುವ ಮತದಾನದಲ್ಲಿ ಭಾಗವಹಿಸುತ್ತೇನೆ.
ಇಂತಿ.ನಿಮ್ಮ ಎಸ್.ಕೆ.ಒಡೆಯರ್. ರಾಷ್ಟ್ರೀಯ ಮಂಡಳಿ ಸದಸ್ಯ.

