ವಿಜಯಪುರ:ಆಗಸ್ಟ್ 7, ಸಾಮಾಜಿಕ ನ್ಯಾಯ ದಿನಾಚರಣೆ( ಮಂಡಲವರದಿಜಾರಿಯಾದ ದಿನ ಆಚರಣೆ ಉದ್ಘಾಟಿಸಿ ಮಾತನಾಡಿದ ಯುವ ಮುಖಂಡ ಸೋಮನಾಥ ಕಳ್ಳಿಮನಿ. ಭಾರತದಲ್ಲಿ 52% ಇರುವ ಹಿಂದುಳಿದ ವರ್ಗಗಳಿಗೆ ಮಂಡಲ್ ವರದಿ ಜಾರಿಗಾಗಿ ಮಾಜಿ ಪ್ರಧಾನಿ ಸಿಂಗ್ ರವರು ತಮ್ಮ ಪ್ರಧಾನಿ ಹುದ್ದೆಯನ್ನೇ ಕಳೆದುಕೊಂಡು ಶಿಕ್ಷಣ ಮತ್ತು ಉದ್ಯೋಗದಲ್ಲಿ 27% ಮೀಸಲಾತಿ ಜಾರಿ ಮೂಲಕ ಅತ್ಯಂತ ಐತಿಹಾಸಿಕ ಮತ್ತು ಕ್ರಾಂತಿಕಾರಿ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಮಂತ್ರಿ ದಿವಂಗತ ವಿಶ್ವನಾಥ್ ಪ್ರತಾಪ್ ಸಿಂಗ್ ರನ್ನು ಸ್ಮರಿಸಿದರು. ಈ ಮೂಲಕ ಅವರು ದೇಶದ ರಾಜಕಾರಣ ಮತ್ತು ಸಾಮಾಜಿಕ ನ್ಯಾಯ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸಿದರು.
ವರದಿ ಜಾರಿಗಾಗಿ ಶ್ರಮಿಸಿದ ಮಹನೀಯರಾದ ಮಂಡಲ್ ಅವರನ್ನು ಮತ್ತು ವಿಪಿ ಸಿಂಗ್ ಅವರ ತ್ಯಾಗವನ್ನು ಇಂದಿನ ಹಿಂದುಳಿದ ವರ್ಗದ ಫಲಾನುಭವಿಗಳು ಮತ್ತು ವಿದ್ಯಾರ್ಥಿಗಳು ತಿಳಿದುಕೊಂಡು ಅವರನ್ನು ಸ್ಮರಿಸಬೇಕು ಎಂದು ಅಹಿಂದ ವರ್ಗಕ್ಕೆ ಕಿವಿಮಾತು ಹೇಳಿದರು. ಸಭೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡರಾದ ಭಾರತಿ ನಾವಿ, ಮಲ್ಲು ಬಿದರಿ ರಮೇಶ್ ಬಡಿಗೇರ್ ಹಾಗೂ ಸಿದ್ದು ಬಾವಿಕಟ್ಟಿ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು

