ದಾವಣಗೆರೆ:ಮೈಸೂರು ದಸರಾ ಸಮಯ ಹತ್ತಿರ ಬರುತಿದ್ದಂತೆ ನಮ್ಮ ಹಲವಾರು ಮಿತ್ರರಿಗೆ ಮೋಬೈಲ್ ರಿಂಗ್ ಬೆಳಿಗ್ಗೆ,ಮದ್ಯಾಹ್ನ,ಸಂಜೆ ಎನ್ನದೆ ಗೆಳೆಯ ಓಎನ.ಸಿದ್ದಯ್ಯನವರಿಂದ ಟ್ರಿಣ್ ಟ್ರಿಣ್ ಟ್ರಿಣ್ ಶಬ್ದ ರಿಂಗನಗುಟ್ಟುವುದು ನಿಲ್ತಿರಲಿಲ್ಲಾ.ಒಂದಲ್ಲಾ ಎರಡಲ್ಲಾ ಹತ್ತಾರು ಬಾರಿ ಎಲ್ಲಾ ಸ್ನೇಹಿತರ ಮೋಬೈಲ್ಗಳಿಗೆ ಓಎನ್.ಸಿದ್ದಯ್ಯನವರ ಪೊನ್ ಕಾಲ್ ಬರುತಿದ್ದವು.
ಓಎನ್.ಸಿದ್ದಯ್ಯ(ಶಿದ್ದಯ್ಯ ನಾಗಯ್ಯ ಒಡೆಯರ್) ಇವರಿಗೆ ಮೈಸೂರಿನ ದಸರಾ ಎಂದರೆ ಅತ್ಯಂತ ಅಚ್ಚುಮೆಚ್ಚು.ಅವರು ಯಾವುದೇಕಾರಣಕ್ಕೂ ಮೈಸೂರು ದಸರಾವನ್ನು ನೋಡಲು ತಪ್ಪಿಸಿಸುತ್ತಿರಲಿಲ್ಲಾ.ಈ ಮೈಸೂರು ದಸರಾ ಹಬ್ಬಕ್ಕೆ ಹೋಗುವ ಸಿದ್ದತೆಯನ್ನು ತಿಂಗಳ ಮುಂಚೆಯಿಂದಲೇ ಸಿದ್ದತೆ ಮಾಡಿಕೊಳ್ಳುತ್ತಿದ್ದರು.ಈ ತಿಂಗಳು ಮುಂಚೆಯ ಸಿದ್ದತೆ ಹೇಗಿರುತಿತ್ತೆಂದರೆ.ಮೊದಲನೆಯದಾಗಿ ತನ್ನ ಕೆಲಸದ ಕಚೇರಿಗೆ ರಜೆಯಸಲುವಾಗಿ ಬೇಡಿಕೆ ಹಾಕುವುದು,ಎರಡನೆಯದಾಗಿ ಮೈಸೂರು ದಸರಾ ಹಬ್ಬಕ್ಕೆ ತನ್ನೆಲ್ಲಾ ಸ್ನೇಹಿತರಿಗೆ ತೋರಿಸಬೇಕು ಮತ್ತು ತನ್ನ ಸ್ನೇಹಿತರೊಂದಿಗೆ ಮೈಸೂರಿನಲ್ಲಿ ದಸರಾ ಆಚರಿಸಬೇಕೆನ್ನುವ ಹಂಬಲ ಬಹಳ ಅವರಿಗೆ ಹಾಗಾಗಿ ಎಲ್ಲಾ ಸ್ನೇಹಿತರಿಗೆ ಪೊನ್ ಮಾಡಿ ಮೈಸೂರು ದಸರಾ ಹಬ್ಬಕ್ಕೆ ಮೈಸೂರಿಗೆ ಹೊರಡಲು ಸಿದ್ದರಾಗಿರಿ ಎಂದು ಅಹ್ವಾನ ಮಾಡುತಿದ್ದರು.ಬಹುತೇಕ ಸ್ನೇಹಿತರಿಗೆ ಹೋಗಲು ಸಮಯ,ಹಣಕಾಸು ಅಥವಾ ರಜೆ ಮುಂತಾದ ಅಡೆತಡೆಗಳಿಂದಾಗಿ ಹೋಗಲಾಗದ ಗೆಳೆಯರು ಇವರ ಪೊನ್ ಕೂಡಾ ರಿಸೀವ್ ಮಾಡುತ್ತಿರಲಿಲ್ಲಾ.ಆದರೂ ಸಿದ್ದಯ್ಯ ನವರು ಬೇಜಾರು ಮಾಡಿಕೊಳ್ಳದೆ ಪದೆಪದೆ ಅವರನ್ನು ಸಂಪರ್ಕಿಸುತಿದ್ದರು.ಹಾಗೂ ಹೀಗೂ ಮೈಸೂರಿಗೆ ಹೊರಡಲು ನಾಲ್ಕಾರು ಜನ ಮಿತ್ರರನ್ನು ಒಪ್ಪಿಸಿ ಕರೆದುಕೊಂಡು ಹೊರಡುತಿದ್ದರು.
ಈ ನಾಲ್ಕಾರು ಮಿತ್ರರಿಗೆ ಮೈಸೂರಲ್ಲಿ ಊಟ,ವಸತಿ,ವಾಹನಸೌಕರ್ಯ ಮತ್ತು ಉತ್ಸವ ವೀಕ್ಷಣೆಗೆ ಮತ್ತು ಚಾಮುಂಡೇಶ್ವರಿ ದರ್ಶನ ಹಾಗೂ ಕಾರ್ಯಕ್ರಮ ವೀಕ್ಷಣೆಗಳಿಗಾಗಿ ಕರೆದುಕೊಂಡು ಹೋದ ಮಿತ್ರರಿಗೆ ತೊಂದರೆಯಾಗದಂತೆ ಮೈಸೂರಿನಲ್ಲಿರುವ ಅವರ ಸಂಭಂದಿಗಳಿಗೆಲ್ಲಾ ಸಂಪರ್ಕಿಸುತ್ತಾ ಜೊತೆಗೆ ಬಂದ ಸ್ನೇಹಿತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಸುತಿದ್ದರು.ಮೈಸೂರಿನಲ್ಲಿರುವ ಅವರ ಸೊಸೆಗೆ ಕಾಲ್ ಮಾಡಿ ನಾವು ಇಷ್ಟು ಜನ ಬರ್ತೆವೆ ನಮಗೆ ವಿವಿಐಪಿ ಪಾಸ್ ಅಥವಾ ಟಿಕೇಟ್ ವ್ಯವಸ್ಥೆ ಆಗಬೇಕೆಂದು ಹೇಳಿ ಎಲ್ಲರಿಗೂ ಪ್ರಥಮದರ್ಜೆಯ ಟಿಕೇಟ್ ವ್ಯವಸ್ಥೆ ಮಾಡುತಿದ್ದರು.ನಂತರ ಅವರ ಸಹೋದರ ಜಗದೀಶ್ ರವರಿಗೆ ಕಾಲ್ ಮಾಡಿ ಊಟ,ವಸತಿಗೆ ಮತ್ತು ವಾಹನ ವ್ಯವಸ್ಥೆ ಮಾಡಿಸುತಿದ್ದರು.ಹೀಗೆ ಎಲ್ಲ ರೀತಿಯ ಸೌಕರ್ಯ ಕ್ಕಾಗಿ ತನ್ನ ಬಂಧುಬಾಂಧವರಿಂದ ಕರೆದುಕೊಂಡು ಹೋದ ಮಿತ್ರರಿಗೆ ಮೈಸೂರು ದಸರೆಯ ವೈಭವವನ್ನು ಕಣ್ತುಂಬಿಸಿ ಹರ್ಷ ಚಕಿತರನ್ನಾಗಿಸಿ ಸ್ನೇಹಿತರ ಹರ್ಷವನ್ನು ಕಂಡು ಕೇಳಿ ಸಂತಷ ಪಡುತಿದ್ದ ಆಪ್ತಮಿತ್ರ ಶ್ರೀ ಸಿದ್ದಯ್ಯ ನಾಗಯ್ಯ ಒಡೆಯರ್ ರವರಿಂದ ಈ ವರ್ಷ ಮಾತ್ರ ಎಲ್ಲಾ ಸ್ನೇಹಿತರ ಮೋಬೈಲ್ಗೆ ಯಾವುದೇ ರಿಂಗ್ ಣಗಳು ಮೌನವಹಿಸಿವೆ ಯಾವಮಿತ್ರರಿಗೂ ಸಿದ್ದಯ್ಯನವರಿಂದ ಮೈಸೂರು ದಸರಾ ಹಬ್ಬಕ್ಕೆ ಆಹ್ವಾನ ಬರಲಿಲ್ಲಾ ಮೈಸೂರಿನಲ್ಲಿರುವ ಅವರ ಸಹೋದರ ಜಗದೀಶ್ ರವರಿಗೆ ಮಿತ್ರರ ಸೌಕರ್ಯಕ್ಕಾಗಿ ದುಂಬಾಲು ಬೀಳಲಿಲ್ಲಾ.ಅವರ ಸೊಸೆಗೂ ಪಾಸ್ ಟಿಕೇಟ್ ಕೊಡಿಸೆಂದು ಕೇಳುವ ದ್ವನಿ ಹೋಗಲಿಲ್ಲಾ.ಈ ವರ್ಷದಿಂದ ಸಿದ್ದಯ್ಯ ನವರಿಂದ ಮೋಬೈಲ್ ರಿಂಗ್ ಆಗದಿದ್ದರೂ ದಸರಾ ಹಬ್ಬ ಮೈಸೂರಲ್ಲಿ ಆಚರಿಸಿ ಸಂಭ್ರಮ ಪಡುತ್ತಿದ್ದ ಮಿತ್ರರಿಗೆ ಹಿಂದಿನ ನೆನಪುಗಳುಮಾತ್ರ.ಪರರ ಸಂತೋಷವನ್ನೇ ತನ್ನ ಸಂತೋಷವೆಂದು ಅನುಭವಿಸುತಿದ್ದ ಸಿದ್ದಯ್ಯ ನವರು ನೆನಪಿನಂಗಳದಿಂದ ಮರೆಯಾಗದವರು

