ದಾವಣಗೆರೆ ಹಳೇ ತಲೆಮಾರಿನ ಕೊನೆ ಕೊಂಡಿ ಯಲ್ಲಪ್ಪ ನವರು ಸದಾ ಶ್ವೇತಧಾರಿ, ಅಷ್ಟೇ ಶುಭ್ರ ಮನಸು ಎಂಥದೇ ಸಂದರ್ಭದಲ್ಲಿ ಗಟ್ಟಿ ನಿರ್ಧಾರ ತಾಳುವ ಹಿರಿಯ ಜೀವ, ಸ್ವಾಭಿಮಾನಿ, ಮತ್ತೋರ್ವ ದಾವಣಗೆರೆ ಹಿರಿಯ ಕೊಡುಗೆ ಧಾನಿ ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ ನವರ ಹಳೇ ಮನೆಯ ಕೇರಿಯ ಆಟವಾಡಿ ನಲಿದು ಬಾಲ್ಯದ ಗೆಳೆಯ
ಭಾವಸಾರ ಕ್ಷತ್ರಿಯ ಕುಲದಲ್ಲಿ ಹುಟ್ಟಿದರೂ ತಾರತಮ್ಯ ಭಾವನೆಗಳೇ ಇಲ್ಲದ ವ್ಯಕ್ತಿ.ತಾನೂಟ್ಠಿದ ಸಮಾಜದ ಏಳ್ಗೆಗಾಗಿ ಶ್ರಮಿಸಿದ ಆರ್ಥಿಕ ಸ್ಥಿತಿ ಸುಧಾರಿಸಿದ ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಸಮಾಜದ ಮುಖಂಡರ ಜತೆ ಹೆಗಲು ಕೊಟ್ಟು ದುಡಿದು ಜೀವ.
ತೇಜಿ ಮಂದಿ ದಾವಣಗೆರೆಯ ..ವ್ಯಾಪಾರಿ ಬುದ್ಧಿ ಇವರಿಂದ ದೂರ, ದಾವಣಗೆರೆ ಆಳ ಹಗಲ ಒಳಗೂ ಹೊರಗೂ ಬಲ್ಲ ತಮ್ಮ ಸೇವಾ ಮನೋಭಾವ
ಸಾಮಾಜಿಕ ಅರಿವು ಅವರನ್ನು ಎಂದೂ ಹಣದಾಸೆಗೆ ಕೈ ಹಾಕದ ಶುಧ್ಧ ಹಸ್ತ.ಈ ವಿಶಾಲ ಸ್ವಚ್ಛ ಮನಸ್ಸಿನಿಂದ
ಎಸ್ಸೆಸ್ಸ್ ಜೊತೆಗಿನ ಸಂಬಂಧ ಬಾಲ್ಯದ ಒಡನಾಟ ಪಡೆದಿದ್ದ ಅವರೆಂದು ತನ್ನ ಸ್ವಾರ್ಥಕ್ಕೆ ಬಳಸಲೇ ಇಲ್ಲ
ಅಂತಹ ಮುಜುಗರ ಸ್ವಭಾವದ ಸ್ವಾಭಿಮಾನಿ
ತನ್ನ ಚಿಕ್ಕ ಕಾಫಿ ಬಾರ್ ಆಯ್ತು, ತಾನಾಯ್ತು
ದಾವಣಗೆರೆಲಿ ತುಂಬಾ ವಿರಳ ಅತಿ ವಿರಳವೇ ಹೌದು.
ಈ ಯಲ್ಲನ್ನನವರು ಅಶೋಕ್ ರಸ್ತೆಯಲ್ಲಿ ಇವರ ಕೈಯಲ್ಲಿ ನಾ ಅಮೃತ ಕಾಫಿ ಬಾರ್ ನ ಸವಿದು ಬೆಳೆದವರು, ಮುಸಳೆ ಕುಟುಂಬಕ್ಕೆ ಹತ್ತಿರ ವಾಗಿ
ಬಾರೋ ಹೇಗಿದಿರಪ್ಪ, ನಿಮ್ಮ ಫ್ರೆಂಡ್ ಅಮುಗೇ ಹೇಳೋ …..ಎಂದು ಅವರು ಪುತ್ರ ಮೈಂ ಪ್ರಸನ್ನ ರಂಗ ಚಟುವಟಿಕೆ ಆ ನಾಟಕ ಈ ಫಂಕ್ಷನ್ ಗೆಂದು ಅಣ್ಣ ವಿಜಿ ಮೇಲೆ ಹೋಟೆಲ್ ಬಿಟ್ಟು ನಮ್ಮ ಜತೆ ಠಳ್ಳನೇ ಹೊರನೆಡೆದಾಗ ಪ್ರೀತಿ ಅಷ್ಟೆ ಎಚ್ಚರಿಕೆ ಮಾತು ಹೇಳಿ ಮೌನವಾಗಿ ಬೆಂಬಲಿಸುತ್ತಾ ನಮ್ಮಗೆ ಬುದ್ದಿ ಹೇಳುತ್ತಲೇ ಪರಿಪಕ್ವತೆ ಇಡೀ ಕುಟುಂಬ ಬದುಕಿಗೆ ತಮ್ಮ ದಾರಿ ಹಿಡಿದಾಗ ತಣ್ಣಗೆ ತಮ್ಮ ಹಿರಿಯ ಜೀವ ಸಂಗಾತಿ ಜೊತೆ ಬದುಕು ಹಾಗೂ ಹಾಕುತಿರುವ ಕಷ್ಟದ ದಿನಗಳು ಕಳೆದವು. ಇಡೀ ಮುಸಳೆ ಕುಟುಂಬದ ಗಟ್ಟಿ ಪಿಲ್ಲರ್ ಯಲ್ಲನ್ನನವರು ಇನ್ನೂ ಕೆಲ ಕಾಲ ಹೀಗೆಯೇ ಸೌಮ್ಯ ಸ್ವಭಾವ ಮೇದು ಮಾತೀನಿಂದಲೇ ನಮ್ಮೊಡನಿದ್ದು ಶತಾಯುಷಿ ಸಂಭ್ರಮ ಸಡಗರ ಕಾಣಲೆಂದು ತುಂಬು ಹೃದಯದ ಭರವಸೆಯೊಂದಿಗೆ ಹಾರೈಕೆಗಳು….
-ಪುರಂದರ್ ಲೋಕಿಕೆರೆ.